ಮೈಲಾರಲಿಂಗ ಪರಂಪರೆ

Author : ಎಫ್.ಟಿ.ಹಳ್ಳಿಕೇರಿ

Pages 326

₹ 280.00




Published by: ಪ್ರಸರಾಂಗ, ಹಂಪಿ ವಿಶ್ವವಿದ್ಯಾಲಯ

Synopsys

ಮಲ್ಲಯ್ಯ, ಮಲ್ಲಣ್ಣ, ಗುಡದಯ್ಯ, ಮಲ್ಹಾರಿ, ಖಂಡೋಬಾ, ಮುಲ್ಲುಖಾನ್, ಅಜಮುತಖಾನ್ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುವ ಮೈಲಾರಲಿಂಗನ ಮುಖ್ಯನೆಲೆ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ. ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದಲ್ಲೂ ಮೈಲಾರಲಿಂಗ ಭಕ್ತರಿದ್ದಾರೆ. ಕುರುಬ ಸಮುದಾಯದ ಪ್ರಮುಖ ಆರಾಧ್ಯ ದೈವವಾಗಿರುವ ಮೈಲಾರಲಿಂಗನ ಕುರಿತು ಕೃತಿಯಲ್ಲಿ ವಿವರಿಸಲಾಗಿದೆ. ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳನ್ನೂ ಜಿಜ್ಞಾಸೆಗೊಳಪಡಿಸುತ್ತದೆ. ಮೈಲಾರಲಿಂಗ ಪರಂಪರೆಯಲ್ಲಿ ಕಾವ್ಯ–ಪುರಾಣ, ಕಲೆ ವಾಸ್ತುಶಿಲ್ಪ, ಜಾತ್ರೆ ಉತ್ಸವ, ಪಂಥ, ಪ್ರಭಾವ ಪರಂಪರೆ, ಬಳ್ಳಾರಿ ಪರಿಸರದ ಕುರುಬರ ಸಂಸ್ಕೃತಿಯ ಕುರಿತು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಲಾಗಿದೆ.

 

About the Author

ಎಫ್.ಟಿ.ಹಳ್ಳಿಕೇರಿ
(01 June 1966)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ್ರಪ್ರತಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕ ಮತ್ತು ಮುಖ್ಯಸ್ಥರು. ಎಂ.ಎ, ಎಂಫಿಲ್ ಪಿಎಚ್‌.ಡಿ ಪದವಿ ಪಡೆದಿರುವ ಅವರಿಗೆ ಹಸ್ತಪ್ರತಿ-ಗ್ರಂಥಸಂಪಾದನೆ, ಹಾಲುಮತ ಸಂಸ್ಕ್ರತಿ, ಹಳೆಗನ್ನಡ-ನಡುಗನ್ನಡ -ನಡುಗನ್ನಡ ಸಾಹಿತ್ಯ, ಯೋಗವಿಜ್ಞಾನ ಆಸಕ್ತಿಯ  ಅಧ್ಯಯನದ ಕ್ಷೇತ್ರಗಳು. ’ಕೆರೆಯ ಪದ್ಮರಸ ಮತ್ತು ಆತನ ವಂಶಜರು , ಕಂಠಪತ್ರ (1,2,3), ಹಾಲುಪತ್ರ’ ಪ್ರಕಟಿತ ಕೃತಿಗಳು. ಹಾಲುಮಠ ಅಧ್ಯಯನ ಪೀಠದ ಸಂಚಾಲಕ, ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ  ಮುಖ್ಯಸ್ಥರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾನಿಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುನ್ನತ ಸಂಶೋಧನಾ ಗ್ರಂಥ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು ಇವರಿಗೆ ...

READ MORE

Related Books