"ಕುಂಚಿಟಿಗ" ಜನಾಂಗ ಶತಶತಮಾನಗಳಿಂದ ತಮ್ಮದೇ ಆದ ಸಂಸ್ಕೃತಿ ಹಾಗು ಸಂಪ್ರದಾಯಗಳನ್ನು ಕಾಪಾಡಿಕೊಂಡುಬಂದವರು. ತಮ್ಮ ಸಂಸ್ಕೃತಿ ಹಾಗು ಸಂಪ್ರದಾಯಗಳಿಗೆ ಧಕ್ಕೆಯಾದಾಗ, ಪರಕೀಯರಿಂದ ದಾಳಿಯಾದಾಗ ತಮ್ಮ ಕುಲ, ಗೋತ್ರ, ಬೆಡಗುಗಳನ್ನು ಬಿಟ್ಟು ಕೊಡದೆ, ತಾವು ನೂರಾರು ವರ್ಷಗಳಿಂದ ನೆಲೆಸಿದ ನಾಡನ್ನೇ ತೊರೆದು ಬಂದವರು. ಕುಂಚಿಟಿಗರ 48 ಕುಲಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕುಂಚಿಟಿಗರು ತಮ್ಮ ಕುಲ, ಗೋತ್ರ, ಬೆಡಗುಗಳ ವಿಭಾಗವನ್ನು ಪ್ರಾಣಿಪಕ್ಷಿ, ಗಿಡಮರಬಳ್ಳಿ, ದವಸಧಾನ್ಯ, ರಾಜಮನೆತನ, ಸೈನಿಕ, ನಂಬಿಕೆ ಮತ್ತು ವಿವಿಧ ವೃತ್ತಿಗಳ ಹೆಸರಿನಲ್ಲಿ ವಿಂಗಡಿಸಿಲಾಗಿದೆ. ಹೀಗೆ ಹಲವಾರು ವರ್ಷಗಳ ಇತಿಹಾಸಗಳನ್ನೊಳಗೊಂಡ ’ಕುಂಚಿಟಿಗ’ ಸಮುದಾಯದ ಸಂಪೂರ್ಣ ಮಾಹಿತಿ ’ಕುಂಚಿಟಿಗರ ಮಹಾಪುರಾಣ’ದಲ್ಲಿದೆ. ಆಲೇನಳ್ಳಿ ಕರೇಗೌಡ ವಿರಚಿತ (ಕ್ರಿ.ಶ.೧೯೩೫) ಈ ಕೃತಿಯನ್ನು ಪ್ರೊ. ಶಿವರಾಮಯ್ಯನವರು ಪರಿಷ್ಕರಿಸಿ ಇಲ್ಲಿ ನೀಡಿದ್ದಾರೆ.
©2024 Book Brahma Private Limited.