ಕಿತ್ತೂರು ಸಂಸ್ಠಾನ ಸಾಹಿತ್ಯ -ಭಾಗ ೧

Author : ಎಂ.ಎಂ. ಕಲಬುರ್ಗಿ

Pages 160

₹ 100.00




Year of Publication: 2005
Published by: ವೀರಶೈವ ಅಧ್ಯಯನ ಸಂಸ್ಥೆ
Address: ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ-ಡಂಬಳ

Synopsys

ಕಿತ್ತೂರು ಚರಿತ್ರೆ ಕುರಿತು ಶಿಷ್ಟರು ಮತ್ತು ಜನಪದ ಕವಿಗಳ ಕೃತಿಗಳು ಒಟ್ಟಿಗೆ ಸಿಗುತ್ತಿರಲಿಲ್ಲ. ಹೀಗಾಗಿ ಈ ಕುರಿತ ಅಪೂರ್ವ ಸಾಹಿತ್ಯ ಅಜ್ಞಾತವಾಗಿಯೇ ಉಳಿದಿತ್ತು. ಇದರ ಅರಿವಿದ್ದ ಕಲಬುರ್ಗಿ ಅವರು ಹಾಡು ಕಟ್ಟಿದವರು ಕಂಡ ಕಿತ್ತೂರನ್ನು ವಿವರಿಸಿದ್ದಾರೆ. ಮೂರು ವಿಭಾಗಗಳಲ್ಲಿ ಕೃತಿ ಮೂಡಿಬಂದಿದ್ದು ಮೊದಲೆರಡು ಭಾಗಗಳನ್ನು ಕೆಲವರ ನೆರವಿನೊಂದಿಗೆ ಸಂಪಾದಿಸಿದರೆ ಮೂರನೆಯ ಭಾಗ ಪರಿಪೂರ್ಣವಾಗಿ ಕಲಬುರ್ಗಿ ಅವರೇ ಸಂಪಾದಿಸಿದ ಗ್ರಂಥ. ಕಿತ್ತೂರನ್ನು ಉಲ್ಲೇಖಿಸಿರುವ ಸರ್ ವಾಲ್ಟರ್ ಎಲಿಯಟ್ ರಚಿಸಿದ 'ಮಿಸಲೆನಿಯಸ್ ಆಫ್ ಸರ್ ವಾಲ್ಟರ್ ಎಲಿಯಟ್' ಆಂಗ್ಲಕೃತಿಯ ಉಲ್ಲೇಖಗಳೂ ಇದರಲ್ಲಿವೆ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books