ಕೆರೆಗಳು ಊರಿನ ಸಂಪತ್ತು. ಜನತೆಯ ಆರೋಗ್ಯಕ್ಕೂ ಪೂರಕ. ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಅಲ್ಲಿಯ ಮರಳು ಬಗೆಯಲು ಲೂಟಿಕೋರರು ಪೈಪೋಟಿ ನಡೆಸುತ್ತಿರುವುದು ಇಂದಿನ ದುರಂತ. ಕೆರೆಗಳು ಊರಿನ ಚಿನ್ನವಿದ್ದ ಹಾಗೆ. ಅದರಡಿಯೂ ಚಿನ್ನದಂತಹ ಖನಿಜಗಳೇ ಇವೆ. ಈ ಕೆರೆಗಳ ಸಂರಕ್ಷಣೆ ಅಸಾಧ್ಯವಾದರೆ ಜನರ ಬದುಕು ಅಸಾಧ್ಯವಾಗುತ್ತದೆ. ದೇಶದ ವಿವಿಧೆಡೆ ಕೆರೆಗಳ ತಳದಲ್ಲಿ ಚಿನ್ನವಿದ್ದು ಅದನ್ನು ಕಾಯುವ ಸಲುವಾಗಿ ದೊಡ್ಡ ಹಾವು ಸುತ್ತುತ್ತಿರುತ್ತದೆ ಎಂಬ ನಂಬಿಕೆ ನಮ್ಮಲ್ಲಿಕೆ ಬಹುತೇಕ ಕೆರೆಗಳ ಬಗ್ಗೆ ಇರುವುದನ್ನು ಕಾಣುತ್ತೇವೆ. ಇದರ ಹಿಂದಿನ ಮರ್ಮ ಏನೆಂದರೆ, ಕೆರೆಗಳೇ ಚಿನ್ನವಿದ್ದ ಹಾಗೆ. ಅವನ್ನು ಕಾಯ್ದುಕೊಂಡು ಹೋಗಬೇಕು ಎಂಬುದನ್ನು ಲೇಖಕರು ಸವಿವರವಾಗಿ ಹಾಗೂ ವೈಜ್ಞಾನಿಕವಾಗಿ ವಿವರಿಸಿದ್ದಾರೆ. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ ಮತ್ತು 21ನೇ ಶತಮಾನದ ಶ್ರೇಷ್ಠ ಮಕ್ಕಳ ಕತೆಯ ಸಾಲಿಗೆ ಸೇರ್ಪಡೆಯಾಗಿದೆ.
©2024 Book Brahma Private Limited.