ಜಯನಗರದ ಹುಡುಗಿ

Author : ಮೇಘನಾ ಸುಧೀಂದ್ರ

Pages 136

₹ 135.00




Year of Publication: 2018
Published by: ಸಾವಣ್ಣ
Address: ಸಾವಣ್ಣ ಪ್ರಕಾಶನ, ನಂ57, ಪುಟ್ಟಣ್ಣರಸ್ತೆ, ಬಸವನಗುಡಿ, ಬೆಂಗಳೂರು.

Synopsys

ಅಧುನೀಕರಣದಿಂದಾಗಿ ಬೆಂಗಳೂರಿನ ಪ್ರತಿಷ್ಟಿತ ಬಡಾವಣೆ ಜಯನಗರದಲ್ಲಿ ಆಗಿರುವ ಬದಲಾವಣೆಯನ್ನು ಲೇಖಕಿ ತಿಳಿಸುತ್ತಾರೆ, ಬೆಂಗಳೂರಿನ ಜಯನಗರದಲ್ಲಿ ಹುಟ್ಟಿಬೆಳೆದ ಲೇಖಕಿ ತನ್ನ ಅನುಭವಗಳನ್ನು ಸರಳ ಸುಂದರ ಕನ್ನಡದಲ್ಲಿ ವಿವರಿಸುತ್ತಾರೆ,ತನ್ನ ಬಾಲ್ಯದಲ್ಲಿ ಕಂಡ ಜಯನಗರ ಮತ್ತು ಆಧುನಿಕ ಜಯನಗರದ ವೆತ್ಯಾಸಗಳನ್ನು ಗಮನಿಸುತ್ತಲೇ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ, ಹುಟ್ಟೂರಿನಂತೆ ಆಪ್ತವಾಗಿದ್ದ ಜಯನಗರ, ದಿನೇ ದಿನೆ ತನ್ನ ಮುಗ್ಧತೆಯನ್ನು ಹೇಗೆ ಕಳೆದುಕೊಳ್ಳುತ್ತಾ ಹೋದ ರೀತಿಯನ್ನು ವಿವರಿಸಿದ್ದಾರೆ, ಜರ್ಮನ್ ಅಜ್ಜ ಕತಲಾನ ಅಜ್ಜಿ, ಅವರೇಕಾಳಿನ ಕಥೆ ಹೀಗೆ ಪ್ರತಿ ಲೇಖನದಲ್ಲಿ ಕೂಡ ಸುಂದರ ಬದುಕಿಗೆ ಬೇಕಾದ ಏನೋ ಒಂದು ಸಂಗತಿ ಸಿಗುತ್ತದೆ

About the Author

ಮೇಘನಾ ಸುಧೀಂದ್ರ

ಜಯನಗರದ ಹುಡುಗಿ ಎಂದೇ ಖ್ಯಾತರಾದ ಮೇಘಾನರವರು ಬಾರ್ಸಿಲೋನಾದಲ್ಲಿ ಏಐ ವಿಷಯದಲ್ಲಿ ಪರಿಣಿತಿ ಪಡೆದು ಈಗ ಬೆಂಗಳೂರಿನ ಒಂದು ಖಾಸಗಿ ಸಂಸ್ಥೆಯಲ್ಲಿ ಏ ಐ(ಕೃತಕ ಬುದ್ಢಿಮತ್ತೆ) ಗುಂಪಿನ ಟೀಮ್ ಲೀಡ್ ಆಗಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ ನಡೆದ ವಿಜಯ ಕರ್ನಾಟಕದ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ವಿಜೇತರು. ಜಯನಗರದ ಹುಡುಗಿ, ಲಿಪಿಯ ಪತ್ರಗಳು #AI ಕಥೆಗಳು,ಬೆಂಗಳೂರು ಕಲರ್ಸ್ , ಪ್ರೀತಿ ಗೀತಿ ಇತ್ಯಾದಿ ಇವರ ಪ್ರಕಟಿತ ಪುಸ್ತಕಗಳು. ಕನ್ನಡಗೊತ್ತಿಲ್ಲ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ 6 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.  ಹೊಸ ಪೀಳಿಗೆಯ ಕಥೆಗಳು ಬರೆಯುವುದು ...

READ MORE

Related Books