ನವಸಾಮ್ರಾಜ್ಯಶಾಹಿ ಪಶ್ಚಿಮರಾಷ್ಟ್ರಗಳು ಪೂರ್ವದ ನೆಲ ಜಲ - ಖನಿಜ ಸಂಪನ್ಮೂಲಗಳನ್ನು ಲೂಟಿ ಹೊಡೆಯುತ್ತವೆ. ಪರಿಣಾಮವಾಗಿ ಭಾತದಂತಹ ಕೃಷಿ ಪ್ರಧಾನ ರಾಷ್ಟ್ರದ ಪ್ರಜೆಗಳು ಪ್ರತಿಯೊಂದಕ್ಕೂ ಸರ್ಕಾರದತ್ತ ಕೈ ಚಾಚುವ ಸ್ಥಿತಿಗೆ ಒಳಗಾಗಿದ್ದಾರೆ. ಓಟಿನ ರಾಜಕಾರಣಿಗಳು ಜವರ ಸ್ವಾವಲಂಬನೆಯನ್ನೇ ಹಾಳು ಮಾಡಿದ್ದಾರೆ. ಅಂಥ ವ್ಯವಸ್ಥೆಯ ವಿರುದ್ಧ ನಮ್ಮ ಜನರು ಸಂಘಟಿತರಾಗಿ ಮೇಲೆದ್ದು ತಮ್ಮ ಉದ್ದಾರವನ್ನು ತಾವೇ ಮಾಡಿಕೊಳ್ಳಬೇಕು ಎಂಬ ಆಶಯವನ್ನು ’ಕುದುರೆಮುಖ” ಸಂಕಲನದ ಈ ಲೇಖನಗಳು ಗಟ್ಟಿ ದನಿಯಲ್ಲಿ ಹೇಳುತ್ತವೆ. ಈ ಸಂಕಲನದ ಬಹಳಷ್ಟು ಲೇಖನಗಳು ಪಶ್ಚಿಮ ಘಟ್ಟದ ಕುದುರೆಮುಖ ಗಣಿಗಾರಿಕೆಯನ್ನು ಕುರಿತು ಇದೆ. ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಅಪೂರ್ವ ಅರಣ್ಯಗಳ ಜೈವಿಕ ನೆಲೆಗಳನ್ನು ನಾಶ ಮಾಡಬಾರದೆಂಬುದೇ ಈ ಸಂಕಲನದ ಮುಖ್ಯ ಆಶಯವಾಗಿದೆ.
©2025 Book Brahma Private Limited.