ಕವಿರಾಜಮಾರ್ಗ: ಸಾಂಸ್ಕೃತಿಕ ಮುಖಾಮುಖಿ

Author : ರಹಮತ್ ತರೀಕೆರೆ

₹ 100.00




Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ 583278

Synopsys

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಸಾಹಿತ್ಯ ಅಧ್ಯಯನ ವಿಭಾಗವು ನಡೆಸಿದ ಸಾಂಸ್ಕೃತಿಕ ಮುಖಾಮುಖಿ ಸರಣಿಯಲ್ಲಿ ಪ್ರಕಟವಾದ ಪುಸ್ತಕವಿದು. ಕನ್ನಡದ ಮೊದಲ ಉಪಲಬ್ಧ ಗ್ರಂಥ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕವಿರಾಜಮಾರ್ಗ’ ಕೃತಿಯ ಕುರಿತು ನಡೆದ ಚರ್ಚೆ, ಸಂವಾದಗಳನ್ನು ಒಳಗೊಂಡಿದೆ. ಪುಸ್ತಕದ ಸಂಪಾದಕರಾಗಿರುವ ರಹಮತ್ ತರೀಕೆರೆ ಅವರು ಅಭ್ಯಾಸಪೂರ್ಣ ಪ್ರಸ್ತಾವನೆಯನ್ನ ಬರೆದಿದ್ದಾರೆ. ಕೆ.ವಿ. ಸುಬ್ಬಣ್ಣ ಅವರ ‘ಕವಿರಾಜಮಾರ್ಗ: ಹೊಸ ಓದು, ಬಸವರಾಜ ಕಲ್ಗುಡಿಯವರ ‘ದೇಸಿ ಚಹರೆಗಳ ಕ್ರಿಯಾಶೀಲತೆ’, ಕಿ.ರಂ. ನಾಗರಾಜ ಅವರ ‘ಹೊಸ ಭಾಷೆಯೊಂದರ ನಿರ್ಮಾಣ’, ಕೆ.ವಿ. ನಾರಾಯಣ ಅವರ ‘ಕವಿರಾಜಮಾರ್ಗ ಏನಿದರ ಹೆಚ್ಚಳ’ ಪಾದೇಕಲ್ಲು ನರಸಿಂಹ ಭಟ್ಟ ಅವರ ‘ಕವಿರಾಜಮಾರ್ಗ ಸಂಸ್ಕೃತ ಪರಂಪರೆಯ ಹಿನ್ನೆಲೆಯಲ್ಲಿ, ಬಂಜಗೆರೆ ಜಯಪ್ರಕಾಶ್ ಅವರ ‘ಕವಿರಾಜಮಾರ್ಗ: ಭಾಷಿಕ- ರಾಜಕೀಯ ಅಂಶಗಳು’, ಎಂ.ಎಂ. ಕಲಬುರ್ಗಿ ಅವರ ‘ಕವಿರಾಜಮಾರ್ಗ ಮತ್ತು ದೇಸಿಯತೆ’, ಜಿ.ಎಸ್. ಶಿವರುದ್ರಪ್ಪ ಅವರ ‘ಕವಿರಾಜಮಾರ್ಗ: ಕೆಲವು ಪ್ರತಿಕ್ರಿಯೆಗಳು ಬರಹಗಳನ್ನು ಒಳಗೊಂಡಿದೆ. ಬಿ.ಎಂ. ಪುಟ್ಟಯ್ಯ ಅವರು ಕವಿರಾಜಮಾರ್ಗದ ಅಧ್ಯಯನ ಸೂಚಿಯನ್ನು ವಿಮರ್ಶಾತ್ಮಕ ಟಿಪ್ಪಣಿಗಳೊಂದಿಗೆ ನೀಡಿದ್ದಾರೆ. ಕವಿರಾಜಮಾರ್ಗ ಗ್ರಂಥದ ಬಗ್ಗೆ ಮತ್ತು ಕನ್ನಡದ ಅಸ್ಮಿತೆಯ ಬಗ್ಗೆ ಓದ ಬಯಸುವ ಮತ್ತು ಅಧ್ಯಯನ ಮಾಡುವವರಿಗೆ ಇದೊಂದು ಪ್ರಮುಖ ಆಕರ ಗ್ರಂಥ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books