ಧರ್ಮ ಪರೀಕ್ಷೆ

Author : ರಹಮತ್ ತರೀಕೆರೆ

Pages 256

₹ 150.00




Published by: ನವಕರ್ನಾಟಕ ಪ್ರಕಾಶನ
Address: 5, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಅಂ.ಪೆ. 5159, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001 

Synopsys

ಸಂಸ್ಕೃತಿ ಚಿಂತಕ, ಸಂಶೋಧಕ ರಹಮತ್ ತರೀಕೆರೆ ಅವರು ಬರೆದ 29 ಬರೆಹಗಳನ್ನು ಈ ಗ್ರಂಥವು ಒಳಗೊಂಡಿದೆ. ಶೀರ್ಷಿಕೆಯಲ್ಲಿಯೇ ಸೂಚಿಸಿರುವಂತೆ ರಾಜಕಾರಣ, ಧರ್ಮ ಮತ್ತು ಸಂಸ್ಕೃತಿ ಕುರಿತ ವೈಚಾರಿಕ ಬರಹಗಳಿವೆ. ಈ ಗ್ರಂಥದ ಲೇಖನಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೇ ಭಾಗದಲ್ಲಿ ಈ ಸಾವು ನ್ಯಾಯವೇ?, ಲಖನೋದ ಮುದುಕಿಯರು, ಕೇಳುವವರಿಲ್ಲದ ಸಾವು, ರೈತರ ಆತ್ಮಹತ್ಯೆ ಮತ್ತು ಮಧ್ಯಮ ವರ್ಗ, ಹಂಪಿ: ಈಚಿನ ಕೆಲವು ಚಿತ್ರಗಳು, ರಣಧೂಳಿಯಲ್ಲಿ ಮರೆಯಾಗುವ ಸಣ್ಣ ಸಂಗತಿ, ಟಿಪ್ಪು, ಮೈಸೂರೊಡೆಯರು ಹಾಗೂ ಬ್ರಿಟಿಷರು, ಮನಕದಡಿದ ವಾಚಕರ ವಾಣಿ, ಮನುಷ್ಯರು ಆಯುಧವಾಗುವುದು, ಬಸವತತ್ವ: ಈಚಿನ ಬೆಳವಣಿಗೆಗಳು ಕುರಿತು ಬರಹಗಳಿವೆ ಎರಡನೇ ಭಾಗದಲ್ಲಿ ಕೋಮುವಾದ, ಶಿವಸಂಸ್ಕೃತಿ- ರಾಮಪುರಾಣ, ಆವರಣ ಏನನ್ನು ಮರೆಮಾಚುತ್ತದೆ. ಭಾರತೀಕರಣಗೊಳ್ಳಿರಿ ಎಂದರೇನು? ದೇಶಬಿಟ್ಟು ಹೋಗು ಎಂಬ ಕರೆ, ಜೈಲಿನ ಎರಡು ದಿನ ಕುರಿತ ಲೇಖನಗಳಿವೆ. ಮೂರನೇ ಭಾಗದಲ್ಲಿ ಮುಸ್ಲಿಂ ಮೂಲಭೂತವಾದ, ಅವರು ಬುದ್ಧನ ಕೆಡವಿದರು. ತಸ್ಲೀಮಾ: ಒಂದು ಹಲ್ಲೆಯ ಪ್ರಕರಣ, ಸದ್ದಾಂ ಮತ್ತು ಶಿವಾಜಿನಗರ, ಭಯೋತ್ಪಾದನೆಯ ಬಲಿಪಶುಗಳು, ಮುಸ್ಲಿಮರ ಮುಂದಣ ಆಯ್ಕೆಗಳು ಬರಹಗಳಿವೆ. ನಾಲ್ಕನೇ ಭಾಗದಲ್ಲಿ ಧರ್ಮದ ಹದ್ದು ಮೀರುವುದು, ಮಂಟೂ ಕತೆಗಳು: ಗುಜರಾತಿನ ನೆಪದಲ್ಲಿ, ಆದಿಲಶಾಹಿ ಕುರಿತ ಪುಸ್ತಕ, ಕಿತಾಬೆ ನವರಸ್, ಅಸ್ಮಿತೆಯ ಹುಡುಕಾಟ, ಬಾಬಾಬುಡನಗಿರಿ ಕುರಿತು ವಿವರಾಣತ್ಮಕ ವಿಶ್ಲೇಷಣೆಗಳಿವೆ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books