ಬೇಂದ್ರೆಯವರನ್ನು ಕುರಿತು ಬೇರೆ ಬೇರೆಯವರು ಬರೆದ ಲೇಖನಗಳ ಸಂಕಲನವಿದು. ಬೇಂದ್ರೆಯವರ ಬದುಕು ಮತ್ತು ಬರಹಗಳನ್ನು ಕುರಿತ ಲೇಖನಗಳಿವೆ. ಅಮೆರಿಕದಲ್ಲಿ ನೆಲೆಸಿರುವ ಕನ್ನಡ ಲೇಖಕರು- ಆಸಕ್ತರು ಬೇಂದ್ರೆ ಕುರಿತು ಆಸಕ್ತಿ ತಳೆದು ಈ ಬರೆಹಗಳನ್ನು ಸಂಕಲಿಸಿ ಪ್ರಕಟಿಸಿದ್ದಾರೆ. ಬೇಂದ್ರೆ ಕುರಿತ ಒಂದು ಉತ್ತಮ ಕೃತಿಯಿದು. ಆಹಿತಾನಲ, ನಳಿನಿ ಮೈಯ ಈ ಕೃತಿಯನ್ನು ಸಂಪಾದಿಸಿದ್ದಾರೆ.
ಸಂಪಾದಕರು ಕೃತಿಯ ಬಗ್ಗೆ ಹೀಗೆ ವಿವರಿಸಿದ್ದಾರೆ-
ಕನ್ನಡ ಸಾಹಿತ್ಯದ ಶ್ರೇಷ್ಠ ಕವಿಗಳಲ್ಲೊಬ್ಬರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಧನ್ಯತಾ ಭಾವನೆಯಿಂದ ಅರ್ಪಿಸುವ "ಅಕ್ಷರ ನಮನ” ಈ ಕೃತಿ. ಒಂದೆ ಅಮೆರಿಕದಿಂದ, ಕನ್ನಡ ಸಾಹಿತಿಗಳಿಗೆ ಗೌರವ ಸಲ್ಲಿಸುವ ಹಲವು ಗ್ರಂಥಗಳ ಪ್ರಕಟಣೆಯಲ್ಲಿ ಭಾಗವಹಿಸುವ ಅವಕಾಶ ನಮಗೆ ಲಭ್ಯವಾಗಿತ್ತು. ಅಂಥವುಗಳಲ್ಲಿ - 'ಕಾರಂತ ಚಿಂತನ' (ಕಡಲಾಚಿಯ ಕನ್ನಡಿಗರಿಂದ), 'ಕುವೆಂಪು ಸಾಹಿತ್ಯ ಸಮೀಕ್ಷೆ', 'ಯದುಗಿರಿಯ ಬೆಳಕು' (ಪುತಿನ ಅವರ ಜೀವನ ಮತ್ತು ಸಾಹಿತ್ಯ'. 'ಕನ್ನಡದಮರಚೇತನ' (ಮಾಸ್ತಿ ವ್ಯಕ್ತಿ ಮತ್ತು ಸಾಹಿತ್ಯ ಕುರಿತು)', 'ಗೆಲುವಿನ ಚಿಲುಮೆ ರಾಜರತ್ನಂ' (ಜಿ. ಪಿ. ರಾಜರತ್ನಂ ಅವರ ಜೀವನ ಮತ್ತು ಸಾಹಿತ್ಯ) “ಅನಂತಮುಖದಮೂರ್ತಿ' (ಯು. ಆರ್. ಅನಂತಮೂರ್ತಿ ಅವರ ಸಾಹಿತ್ಯ ಕುರಿತು)ಕೆಲವು, ಅಲ್ಲದೆ, ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ, "ನಗೆಗನ್ನಡಂ ಗೆಲ್ಗೆ' (ಹಾಸ್ಯ ಸಾಹಿತ್ಯ ಕುರಿತು) ಮತ್ತು 'ಕನ್ನಡ ಕಾದಂಬರಿ ಲೋಕದಲ್ಲಿ... ಹೀಗೆ ಹಲವು' (ಆಧುನಿಕ ಕನ್ನಡ ಕಾದಂಬರಿಗಳ ವಿಮರ್ಶೆ)ಹೀಗೆ ಹಲವು ಕೃತಿಗಳು ಅಮೆರಿಕದಿಂದ ಪ್ರಕಟವಾಗಿದೆ. ಈಗ ಜ್ಞಾನಪೀಠ ಪುರಸ್ಕೃತ 'ವರಕವಿ' ಎಂದೇ ಗುರುತಿಸಲ್ಪಟ್ಟ 'ಅಂಬಿಕಾತನಯದತ್ತ' ಎಂಬ ಕಾವ್ಯನಾದು ಹೊತ್ತ, ದ.ರಾ. ಬೇಂದ್ರೆಯವರ ಸಾಹಿತ್ಯ ಮತ್ತು ಜೀವನದ ವಿಲಾಂಚ್ ದರ್ಶನವನ್ನು ಪರಿಚಯಿಸುವ ಕೃತಿಯನ್ನು ನಿಮ್ಮ ಮುಂದಿಡಲು ಸಂತೋಷವಾಗುತ್ತಿದೆ. ಎಂದಿನಂತೆ, ಓದುಗರು ಇದನ್ನು ಮೆಟ್ಟಿಯಾರೆಂಬ ನಂಬಿಕೆ ನಮ್ಮದು.
©2025 Book Brahma Private Limited.