ಎರಡು ತಲೆಮಾರು ಇದೊಂದು ವಿಶಿಷ್ಟ ಕೃತಿ. ನಾಡಿನ ಹೆಸರಾಂತ ಗಣ್ಯವ್ಯಕ್ತಿಗಳು ಸಾಹಿತಿಗಳು ಪತ್ರಕರ್ತರು ಸಾಮಾಜಿಕ ಕಾರ್ಯಕರ್ತರು ಹೀಗೆ ಹಲವಾರು ಕ್ಷೇತ್ರದ ಜನರೆಲ್ಲರು ತಮ್ಮ ಬಾಲ್ಯದ ದಿನಗಳು ಹಾಗೂ ಬೆಳೆದು ಬಂದ ಬಗೆಯನ್ನು ತಮ್ಮ ಮೇಲೆ ಪ್ರಭಾವ ಬೀರಿದ ಸಂಗತಿಗಳನ್ನು ಸಂಗ್ರಹಿಸಲಾಗಿದೆ. ಎಲ್ಲರ ಬದುಕು, ವ್ಯಕ್ತಿತ್ವವನ್ನು ರೂಪಿಸುವಲ್ಲಿ ತಾಯ್ತಂದೆಯರ ಪಾತ್ರ ಹಿರಿದು. ಹೆತ್ತವರ ಬಗೆಗೆ ಸಾಹಿತ್ಯ ಲೋಕದ ಹಲವು ಪ್ರಮುಖರು ಬರೆದ 61 ಲೇಖನಗಳ ಈ ಸಂಕಲನದಲ್ಲಿದೆ. ಕುಂವೀ, ಎಚ್ಚೆಸ್ವಿ, ಪಿ.ಲಂಕೇಶ್, ಸುಬ್ರಾಯ ಚೊಕ್ಕಾಡಿ, ಯು.ಆರ್.ಅನಂತಮೂರ್ತಿ ಮೊದಲಾದವರು ಬರೆದ ಲೇಖನಗಳನ್ನು ಅರವಿಂದ ಚೊಕ್ಕಾಡಿಯವರು ಸಂಗ್ರಹಿಸಿದ್ದಾರೆ.
©2025 Book Brahma Private Limited.