ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಕರಾಗಿ, ನಿರಂತರವಾಗಿ ದುಡಿದ ಪಂಚಭಾಷಾ ವಿಶಾರರಾಗಿದ್ದಾರೆ ಕಯ್ಯಾರ ರೈ. ಕಯ್ಯಾರ ರೈರವರು ಸತತ 50 ವರ್ಷಗಳ ಕಾಲ ಕನ್ನಡಕ್ಕಾಗಿ ಹೋರಾಟ ಮಾಡಿದವರು. ಸಹಸ್ರಾರು ಲೇಖನ, ಭಾಷಣಗಳ ಮೂಲಕ ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹರಡಿದ ಇವರು ಸಾಹಿತಿಯಾಗಿ, ಅಧ್ಯಾಪಕರಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜ ಸುಧಾರಕನಾಗಿ ಛಾಪು ಮೂಡಿಸಿದ ಇವರ ಬದುಕು ಹೊಸ ಪೀಳಿಗೆಗೆ ಮಾದರಿಯಾಗಿದೆ. ಕೈಯಾರರವರ ಕೆಲವು ಪರಿಣಾಮಕಾರಿ ಭಾಷಣಗಳು, ಲೇಖನಗಳನ್ನು ಆಯ್ದು, ಸಂಪಾದಿಸಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ರವರು ಈ ಕೃತಿಯನ್ನು ರಚಿಸಿದ್ದಾರೆ.
©2025 Book Brahma Private Limited.