ಡಾ. ರಘುಶಂಖ ಭಾತಂಬ್ರಾ ಅವರ ಬಹುದೊಡ್ಡ ಆಸಕ್ತಿಯ ಕ್ಷೇತ್ರ ಹನ್ನೆರಡನೇ ಶತಮಾನದ ಶರಣರ ಜೀವನ. ಆಧುನಿಕ ಜೀವ ಜಗತ್ತಿನ ನೆಲೆಗಳು ವಚನಗಳಲ್ಲೂ ಕಾಣಸಿಗುತ್ತವೆ ಎಂಬುದನ್ನು ಬಿಂಬಿಸುವ ಕೃತಿ ವಚನಕಾರರು ಪ್ರತಿಪಾದಿಸಿದ ಕಾಯಕ ನಿರ್ವಹಣೆ, ಸತ್ಯಶುದ್ಧ ಜೀವನ ವಿಧಾನಗಳು ಸಮರ್ಥವಾದ ಆರ್ಥಿಕ ನೀತಿಯನ್ನು ಚರ್ಚಿಸುತ್ತದೆ. ಲಾಭಾಂಶ, ಹಂಚಿಕೆಯ ಪ್ರಕ್ರಿಯೆಗಳೂ ಸಮಾನ ರೇಖೆಯಲ್ಲಿ ನಡೆಯುತ್ತಿದ್ದುದರಿಂದ ಸಮಾಜದಲ್ಲಂದು ಬಡತನ, ದಾರಿದ್ರ್ಯಗಳು ಹೇಗೆ ಕಾಣೆಯಾದವು ಎಂಬ ದಟ್ಟ ವಿವರಗಳನ್ನು ನೀಡುತ್ತದೆ. ಅಲ್ಲದೆ ವಚನಕಾರರ ಆರೋಗ್ಯ ಕುರಿತ ಚಿಂತನೆಗಳ ಕುರಿತೂ ಗ್ರಂಥ ದೃಷ್ಟಿ ಹಾಯಿಸುತ್ತದೆ.
ಶರೀರ ರಚನೆ, ನಾಟಿ ವೈದ್ಯಕೀಯ ಪದ್ಧತಿ, ರೋಗ ರುಜಿನಗಳ ಔಷಧೋಪಚಾರವನ್ನು ಕುರಿತು ವಚನಕಾರರು ಸೂಚ್ಯವಾಗಿ ಹೇಳಿದ್ದರೂ ಸತ್ಯಶುದ್ಧ ಶಿವಾಚಾರ ಸಂಪನ್ನರಾಗಿ ಬಾಳಬೇಕು. ನಿರಂತರ ಕಾಯಕಜೀವಿಗಳಾಗಬೇಕು, ನಿರೋಗಿಗಳಾಗಿರಬೇಕೆಂಬ ಅರ್ಥಪೂರ್ಣ ಪರಿಕಲ್ಪನೆಯನ್ನು ಬಿಂಬಿಸಲಾಗಿದೆ. ಒಟ್ಟಾರೆ ವಚನಕಾರರ ಸಮತಾವಾದದ ಆಶಯಗಳನ್ನು ಅಧ್ಯಯನ ಮಾಡುವ ಯತ್ನ ಕೃತಿಯದ್ದು.
©2025 Book Brahma Private Limited.