ಹಕ್ಕಿ ನೋಟ

Author : ದ.ಬಾ. ಕುಲಕರ್ಣಿ

Pages 106

₹ 10.00




Year of Publication: 1994
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ದ.ಬಾ. ಕುಲಕರ್ಣಿ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿಅವರು ರಚಿಸಿದ ವ್ಯಕ್ತಿಚಿತ್ರ ಮತ್ತು ವಿಮರ್ಶಾ ಲೇಖನಗಳ ಸಂಕಲನ. ಧಾರವಾಡದವರಾದ ದ.ಬಾ. ಕುಲಕರ್ಣಿ ಅವರು ನವೋದಯ ಲೇಖಕರಲ್ಲಿ ಒಬ್ಬರು. ಬೇಂದ್ರೆಯವರು ಕಟ್ಟಿದ ಗೆಳೆಯರ ಗುಂಪಿನ ಭಾಗವಾಗಿದ್ದರು. ಈ ಪುಸ್ತಕದಲ್ಲಿ ಸಾಹಿತ್ಯ ವಿಮರ್ಶಾ ಲೇಖನಗಳ ಜೊತೆಯಲ್ಲಿಯೇ ಹಿರಿಯ ಸಾಹಿತಿಗಳಾದ ದ.ರಾ. ಬೇಂದ್ರೆ, ಶಿವರಾಮ ಕಾರಂತ. ವಿ.ಕೃ. ಗೋಕಾಕ್ ಮುಂತಾದ ವ್ಯಕ್ತಿಗಳ ಪರಿಚಯವನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಡುತ್ತವೆ. ’ಹಕ್ಕಿನೋಟ’ದಲ್ಲಿ ಕುಲಕರ್ಣಿ ಅವರು ಯಾವುದೇ ಪೂರ್ವಗ್ರಹಗಳಿಲ್ಲದೇ ನೇರವಾಗಿ ಬರೆದಿರುವುದು ಸೊಗಸಾದ ಓದಿಗೆ ಅನುವು ಮಾಡಿಕೊಡುತ್ತದೆ.

About the Author

ದ.ಬಾ. ಕುಲಕರ್ಣಿ
(23 March 1916 - 11 August 1963)

ದ.ಬಾ. ಕುಲಕರ್ಣಿ ಎಂದು ಚಿರಪರಿಚಿತರಾಗಿರುವ ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿ ಅವರು ನವೋದಯ ಕಾಲದ ಪ್ರಮುಖ ಲೇಖಕರಲ್ಲಿ ಒಬ್ಬರು. 1916ರಲ್ಲಿ ಜನಿಸಿದ ಅವರು ಧಾರವಾಡದಲ್ಲಿ ಲಲಿತ ಸಾಹಿತ್ಯ ಮಾಲೆ ಹಾಗೂ ಮನೋಹರ ಗ್ರಂಥ ಭಂಡಾರ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಕ್ಕಿ ನೋಟ (ವ್ಯಕ್ತಿ ಚಿತ್ರ), ನಾ ಕಂಡ ಗೌರಮ್ಮ (ವ್ಯಕ್ತಿ ಚಿತ್ರ), ಸಾವಧಾನ (ಪ್ರಬಂಧ ಸಂಕಲನ), ಕಪ್ಪು ಹುಡುಗಿ ( ಕಥಾ ಸಂಕಲನ), ನಾಳಿನ ಮನಸು ( ಕಥಾ ಸಂಕಲನ), ಹಾಸು ಹೊಕ್ಕು ( ಕಥಾ ಸಂಕಲನ) ಅವರ ಪ್ರಕಟಿತ ಕೃತಿಗಳು. ದ.ಬಾ. ಅವರು 1963ರಲ್ಲಿ ಅಸು ...

READ MORE

Related Books