ಅಪ್ಪಂದಿರ ಬಗೆಗಿನ ಅಪರೂಪದ ಪುಸ್ತಕ ’ಅಪ್ಪರೂಪ’. ಇಪ್ಪತ್ನಾಲ್ಕು ಬರಹಗಾರರು ತಮ್ಮ ತಂದೆಯವರನ್ನು ನೆನೆದು ಬರೆದಿರುವ ಲೇಖನಗಳನ್ನೆಲ್ಲಾ ಒಂದೆಡೆ ಸಂಗ್ರಹಿಸಿ ಹೊರತಂದಿದ್ದಾರೆ ಗುರುರಾಜ ಕುರ್ತಕೋಟಿ.
ಜಯಂತ ಕಾಯ್ಕಿಣಿ, ಕಿರಣ ಕೆ ವಿ, ತಿರುಪತಿಭಂಗಿ, ಭಾರತಿ ಪ್ರಸಾದ ಮುಂತಾದವರು ಬರೆದ ಲೇಖನಗಳನ್ನು ಕೃತಿ ಒಳಗೊಂಡಿದೆ. ಎವರೆಸ್ಟಿನೆತ್ತರ ನಮ್ಮಪ್ಪ ಎಂದು ಅಪ್ಪನ ಧೀಮಂತ ವ್ಯಕ್ತಿತ್ವವ ನೆನೆದು ಕಂಬನಿ ಮಿಡಿಯುತ್ತಾರೆ ಸುಬ್ರಾಯ ಭಾಗವತ್. ಊರಿಗೆ ಮಾಸ್ತರಾದರೂ ನನಗೆ ಅಪ್ಪ ಮಾತ್ರ ಎಂದು ಚಿಂತನಶೀಲ ತಂದೆಯ ಜೀವನ ಮೆಲುಕುಹಾಕುತ್ತಾರೆ ಜಯಂತ ಕಾಯ್ಕಿಣಿ ಯವರು. ನಾಡಿನ ನಾನಾ ಭಾಗಗಳ ಲೇಖಕರಿಂದ ರೂಪುಗೊಂಡ ಈ ಕೃತಿ ಭಾವನಾತ್ಮಕ ನೆಲೆಯಲ್ಲಿ ಸೆಳೆಯುತ್ತದೆ.
©2024 Book Brahma Private Limited.