ಲೇಖಕ ಸಿದ್ದು ಯಾಪಲಪರವಿಯವರು ’ಅಸಂಗತ ಬರಹಗಳು’ ಕೃತಿಯಲ್ಲಿ ತನ್ನ ಬಾಲ್ಯದಲ್ಲಿ ತೀವ್ರವಾಗಿ ಕಾಡಿದ ಘಟನೆಗಳು, ವ್ಯಕ್ತಿಗಳು ಹಾಗೂ ಪ್ರಸಂಗಗಳನ್ನು ದಾಖಲಿಸಿದ್ದಾರೆ. ಕೃತಿಯಲ್ಲಿ ನಾಲ್ಕು ಭಾಗಗಳಿದ್ದು ಬಾಲ್ಯದ ನೆನಪನ್ನು ’ನೆನಪಿನಾಳ’ ಎಂಬ ಭಾಗದಲ್ಲಿ, ಯುವ ಮನಸ್ಸಿನ ಹುಚ್ಚು, ಭ್ರಾಮಕ ತಲ್ಲಣಗಳನ್ನು ’ಲವ್ಕಾಲ’ ಎಂಬ ಭಾಗದಲ್ಲಿ, ವ್ಯಕ್ತಿತ್ವ ವಿಕಸನ ಸಂದಂರ್ಭದಲ್ಲಿನ ಅಂಶಗಳನ್ನು ’ಜಾಯ್ ಫುಲ್ ಲಿವಿಂಗ್’ ನಲ್ಲಿ, ಹಾಗೂ ಸಾರ್ವಜನಿಕ ಜೀವನದಲ್ಲಿ ಸಂಧಿಸಿದವರ ಕುರಿತು, ಸಕಾಲಿಕ ಸಂಗತಿಗಳನ್ನು ’ಸಕಾಲಿಕ’ ಎಂಬ ಭಾಗದಲ್ಲಿ ದಾಖಲಿಸಿದ್ದಾರೆ.
ಸಸ್ಯಶಾಸ್ತ್ರ ವಿಜ್ಞಾನಿ ಡಾ ಆರ್.ಎಂ.ರಂಗನಾಥ ಅವರು ’ಗಂಡು-ಹೆಣ್ಣಿನ ಸಂಬಂಧವನ್ನು ಕಾಮದಾಚೆಗೆ ನೋಡುವ ದೃಷ್ಟಿಕೋನ ಇದೆ. ಕಾಮವನ್ನು ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ರೀತಿಯಲ್ಲಿ ಹೊಸತನವಿದೆ. ಸಿದ್ದು ಯಾಪಲಪರವಿ ಬರಹಗಳಲ್ಲಿ ಫ್ರೆಂಚ್ ಕಥೆಗಾರ ಗೈದೇ ಮಾಪಸಾ ಹಾಗೂ ಅಮೇರಿಕದ ಚಿಂತಕ ರಾಲ್ಸ್ ವಾಲ್ಲೋ ಎಮರ್ಸನ್‌ರ ಕಥನ ಶೈಲಿಯಿದೆ. ಎಲ್ಲವನ್ನು ಗ್ರಹಿಸುವ, ಅರ್ಥ ಮಾಡಿಕೊಳ್ಳುವ ಜೀವನ್ಮುಖತೆ ಹಾಗೂ ಅನಿಸಿದ್ದನ್ನು ತನ್ನದೇ ಆದ ಶೈಲಿಯಲ್ಲಿ ತಕ್ಷಣ ದಾಖಲಿಸುವ ತೀವ್ರತೆ ಬೆರಗು ಹುಟ್ಟಿಸುತ್ತದೆ’ ಎಂದಿದ್ದಾರೆ.
©2025 Book Brahma Private Limited.