ಯಕ್ಷಗಾನದ ಯುಗ ಪ್ರವರ್ತಕರಲ್ಲಿ ಮಾರ್ವಿ ನಾರ್ಣಪ್ಪ ಉಪ್ಪೂರರೂ ಪ್ರಮುಖರು. ಬಡಗುತಿಟ್ಟಿನ ಯಕ್ಷಗಾನ ಭಾಗವತರಾಗಿ, ಪ್ರಾಚಾರ್ಯರಾಗಿ ಯಕ್ಷಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದವರು. ಆ ಮಾತನ್ನು ಉಪ್ಪೂರರ ಭಾಗವತಿಕೆಯನ್ನು ನೋಡಿಯೇ ಹೇಳಿದ್ದಾರೇನೋ ಎನ್ನುವಷ್ಟು ಅವರು ರಂಗದಲ್ಲಿ ಹಲವು ಪಾತ್ರಗಳನ್ನು ಕುಣಿಸಿದ್ದಾರೆ. ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದವರು. 1966ರ ವೇಳೆಗೇ ಯಕ್ಷಗಾನ ಶಿಕ್ಷಕ ಎಂಬ ಕೈಪಿಡಿ ಹೊರತಂದರು. ಯಕ್ಷಗಾನಕ್ಕೆ ಸೂಕ್ತವಾದ ಪಠ್ಯವನ್ನೂ ರೂಪಿಸಿದವರು. ಹಲವಾರು ಯಕ್ಷಗಾನ ಕೃತಿಯನ್ನೂ ರಚಿಸಿ ಯಕ್ಷಲೋಕಕ್ಕೆ ಕೊಟ್ಟವರು ಅವರು. ಉಪ್ಪೂರರ ಅಮರತ್ವವನ್ನು ಸಾರುವ ಪುಸ್ತಕ ಇದು. ಅಭಿಮಾನ, ಅಭಿಜ್ಞಾನ, ಆತ್ಮೀಯತೆ, ಅನುಬಂಧ, ಅವಲೋಕನ ಹೀಗೆ ಐದು ಭಾಗಗಳಲ್ಲಿ ಇಲ್ಲಿ ಲೇಖನಗಳಿವೆ. ಉಪ್ಪೂರರನ್ನು ಭಾಗವತರಾಗಿ ಕಂಡವರು, ಅವರೊಡನೆ ಒಡನಾಡಿದವರು, ಅವರ ಮಾರ್ಗದರ್ಶನದಲ್ಲಿ ಬೆಳೆದು ಬಂದವರು, ಅವರ ಭಾಗವತಿಕೆಗೆ ಅರ್ಥ ಹೇಳಿದವರು, ಕುಣಿದವರು, ಪ್ರೇಕ್ಷಕರಾಗಿ ಕುಪ್ಪಳಿಸಿದವರು ಹೀಗೆ ಎಲ್ಲರೂ ಇಲ್ಲಿ ಲೇಖನಗಳನ್ನು ಬರೆದಿದ್ದಾರೆ.
©2025 Book Brahma Private Limited.