ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಕುರಿತ ಲೇಖನಗಳನ್ನು ಸಂಗ್ರಹಿಸಿ ಸಂಪಾದಿಸಿದ ಪುಸ್ತಕ ಅಕ್ಷರದವ್ವ. ಈ ಸಂಕಲನವನ್ನು ಕೆ. ನೀಲಾ ಅವರು ಸಂಪಾದಿಸಿದ್ದಾರೆ.
ಈ ಪುಸ್ತಕದಲ್ಲಿ ಸಾವಿತ್ರಿಬಾಯಿ ಫುಲೆರವರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಮಾಡಿದ ಸಂಘರ್ಷದ ಬದುಕಿನ ಬಗ್ಗೆ ಹಾಗೂ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾದ ಮಹಿಳೆಯರಿಗಾಗಿ ತೊಟ್ಟಿಲ ಮನೆ ತೆರೆದು ಅನ್ಯಾಯಕ್ಕೆ ಒಳಗಾದ ಮಹಿಳೆರಿಗೆ ಆಶ್ರಯ ನೀಡಿದರ ಬಗ್ಗೆ, ಮತ್ತು ಎಲ್ಲಾ ಸಮುದಾಯದ ಹೆಣ್ಣು ಮಕ್ಕಳಿಗೆ ಸಮಾನ ಶಿಕ್ಷಣ ಸಿಗಬೇಕೆಂದು ಮೊಟ್ಟ ಮೊದಲ ಬಾರಿಗೆ ಹೆಣ್ಣು ಮಕ್ಕಳ ಶಾಲೆಯನ್ನು ತೆರೆದಿರುವ ಕುರಿತು ವಿವಿಧ ಲೇಖಕರು ಬರೆದ ಲೇಖನಗಳನ್ನು ಸಂಗ್ರಹಿಸಿ ಸಂಪಾದಿಸಿದ ಉತ್ತಮವಾದ ಪುಸ್ತಕ ಅಕ್ಷರದವ್ವ.
©2024 Book Brahma Private Limited.