ಹಳೆಯ ಕುಮಾರರಾಮನ ಸಾಂಗತ್ಯ

Author : ಎಂ.ಎಂ. ಕಲಬುರ್ಗಿ

Pages 156

₹ 150.00




Published by: ಸಪ್ನ ಬುಕ್ ಹೌಸ್

Synopsys

ಕುಮಾರರಾಮನ ಕುರಿತು ಈವರೆಗೆ ಬಂದಿರುವ ಐದು ಕೃತಿಗಳಿಗೆ ಹೆಚ್ಚೂಕಡಿಮೆ ಆಕಾರ ಗ್ರಂಥ ಹಳೆಯ ಕುಮಾರರಾಮನ ಸಾಂಗತ್ಯವೇ ಆಗಿದೆ ಎಂಬ ಅಭಿಪ್ರಾಯ ಸಂಶೋಧಕರಾದ ಡಾ.ಎಂ.ಎಂ. ಕಲಬುರ್ಗಿ ಅವರದ್ದು. ಎರಡು ಬಾರಿ ಯುದ್ಧ ಗೆದ್ದಿದ್ದ ಕುಮಾರರಾಮ ಮೂರನೇ ಬಾರಿ ಮಣಿದು ಹೋಗುತ್ತಾನೆ. ಆತನ ಸೋಲಿಗೆ ಕಾರಣಗಳು, ಅಂದಿನ ಧರ್ಮಗಳ ನಡುವಿನ ಯುದ್ಧ, ತೆಲುಗಿನ ಕೆಲವರ ಸಂಚು ಮುಂತಾದ ಆಸಕ್ತಿಕರ ವಿಚಾರಗಳು ಕೃತಿಯಲ್ಲಿವೆ. ಹತ್ತು ಸಂಧಿಗಳಲ್ಲಿ ಸಾಂಗತ್ಯದ ಪಠ್ಯವನ್ನು ನೀಡಲಾಗಿದೆ. ಕೃತಿಯ ಮೂಲರಚನೆಕಾರ ಪಾಂಚಾಳ ಗಂಗ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books