ವಿದ್ವಾಂಸರಾದ ಡಾ. ಟಿ ವಿ ವೆಂಕಟಾಚಲಶಾಸ್ತ್ರೀ ಅವರು ರಚಿಸಿರುವ ’ಹಳಗನ್ನಡ ವ್ಯಾಕರಣ ಪ್ರವೇಶಿಕೆ’ ಕೃತಿಯು ಭಾಷಾ ಅಧ್ಯಯನ ದೃಷ್ಟಿಯಿಂದ ಮಹತ್ವಪೂರ್ಣವಾದುದು.
ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಭಾಷೆ, ಧರ್ಮ, ತತ್ವಜ್ಞಾನ, ಚರಿತ್ರೆಯ ವಿಭಾಗಗಳಲ್ಲಿ ಪ್ರಾಚೀನ ಕನ್ನಡ ಭಾಷೆ, ಸಾಹಿತ್ಯದ ಅಧ್ಯಯನಗಳ ಕುರಿತಂತೆ ಆಸಕ್ತಿ ಕುತೂಹಲಗಳು ಹೆಚ್ಚಿವೆ. ಜೊತೆಗೆ ನಮ್ಮಲ್ಲಿಯೂ ಹೊಸ ತಲೆಮಾರಿನ ಜನ ಈ ಕಡೆ ಆಕರ್ಷಿತರಾಗುತ್ತಿದ್ದಾರೆ. ಆದರೆ ಹಲವು ಸಾಹಿತ್ಯ ಕೃತಿಗಳನ್ನು ಚೆನ್ನಾಗಿ ಓದಿ, ಅರ್ಥಮಾಡಿಕೊಳ್ಳಲು ಹಳಗನ್ನಡ ವ್ಯಾಕರಣದ ಓದು ಮತ್ತು ಅಧ್ಯಯನಗಳು ಅತ್ಯವಶ್ಯ ಹೀಗಾಗಿ ಈ ಕೃತಿ ಹೆಚ್ಚು ವಿವರ, ನಿರೂಪಣೆಯಿಂದ ಕೂಡಿದ್ದಾಗಿ ಅಭ್ಯಾಸಕ್ಕೆ ಹೆಚ್ಚು ಅನುಕೂಲಮಾಡಿಕೊಡಬಹುದೆಂಬ ನಿರೀಕ್ಷೆಯಲ್ಲಿ ಈ ಕೃತಿಯನ್ನು ರಚಿಸಲಾಗಿದೆ.
©2024 Book Brahma Private Limited.