ಎರಡು ದಡ

Author : ಚೆನ್ನವೀರ ಕಣವಿ

Pages 84

₹ 45.00




Year of Publication: 1969
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಸಂ. 9, ’ರಮ್ಯ’, ಗೋಕುಲಂ, 3ನೆಯ ಹಂತ, ಮೈಸೂರು
Phone: 2513821/9880749412

Synopsys

ಕಣವಿಯವರ ಎಂಟನೆಯ ಸಂಕಲನ 'ಎರಡು ದಡ'. 1969ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ  ಕವನ ಸಂಕಲನದಲ್ಲಿ 28 ಕವಿತೆಗಳಿವೆ. ಜೀವನದ ಸಂಕೀರ್ಣ ಅನುಭವವನ್ನು ಇಲ್ಲಿನ ಕವಿತೆಗಳು ಚಿತ್ರಿಸುತ್ತವೆ. ಕವಿಯ ಆಂತರಂಗಿಕ ಮತ್ತು ಬಾಹ್ಯ ವ್ಯಕ್ತಿತ್ವದ ಸ್ಪಂದನಗಳೆರಡೂ 'ಎರಡು ದಡ'ದ ಕವಿತೆಗಳಲ್ಲಿ ಕಾಣಿಸುತ್ತದೆ. 

ಬದುಕಿನ ದ್ವಂದ್ವ ಹಾಗೂ ವಾಸ್ತವತೆಯ ನಿಜಸ್ವರೂಪಗಳೆರಡನ್ನೂ ತೀವ್ರಗೊಳ್ಳುವಂತೆ ಕಣವಿಯವರು ಅಭಿವ್ಯಕ್ತಿಸಿದ್ದಾರೆ. ಹಾಗೆಯೇ ಹೊಸ ಕಾವ್ಯದ ಅತಿರೇಕವು ತೀವ್ರ ವಿಡಂಬನೆಗೂ ಒಳಗಾಗಿದೆ. 'ನಂಬಿಕೆ' ಕವಿತೆ ವಿಶಿಷ್ಟ ಸಂವೇದನೆ ಪ್ರಕಟಿಸುತ್ತದೆ. ನಂಬಿಕೆ, ಎನ್ನುವುದು ಅಮೂರ್ತವಾದದ್ದಾದರೂ ಅದು ಮಾನವ ಜೀವನಕ್ಕೆ ಅತ್ಯಗತ್ಯವಾಗಿರುವುದನ್ನು ಈ ಕವಿತೆ ಸೊಗಸಾಗಿ ಚಿತ್ರಿಸಿದೆ.

About the Author

ಚೆನ್ನವೀರ ಕಣವಿ
(28 June 1928)

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...

READ MORE

Related Books