ದೃಶ್ಯಮಂಥನ

Author : ಪರಶುರಾಮ.ಪಿ

Pages 72

₹ 90.00




Year of Publication: 2011
Published by: ಚಿತ್ರಾಲಯ
Address: ಪ್ಲಾಟ್ ನಂ: 17, ಪ್ರಶಾಂತ ನಗರ(ಬಿ), ಗುಲಬರ್ಗಾ- 585105
Phone: 09901360105

Synopsys

‘ದೃಶ್ಯಮಂಥನ’ ಕಲಾವಿದ ಪರಶುರಾಮ ಪಿ. ಅವರು ಬರೆದಿರುವ ದೃಶ್ಯಕಲೆ ಕುರಿತ ಲೇಖನಗಳ ಸಂಕಲನ. ಇಲ್ಲಿಯ ಲೇಖನಗಳು ಕನ್ನಡ ದೃಶ್ಯಕಲಾಕ್ಷೇತ್ರಕ್ಕೆ ವಿಶಿಷ್ಟ ಆಯಾಮಗಳ ಮಹತ್ವದ ಕೊಡುಗೆ ನೀಡಿವೆ.

ದೃಶ್ಯಕಲಾ ಸಾಹಿತ್ಯ ಸದೃಢವಾಗಿ ಮತ್ತು ವ್ಯಾಪಕವಾಗಿ ಬೆಳೆದಿದೆ. ಕನ್ನಡ ದೃಶ್ಯಕಲಾ ಸಾಹಿತ್ಯ ಕ್ಷೇತ್ರದಲ್ಲಿ ಈ ತರಹದ ಸಂಕಲಗಳಿಗೆ ಅವುಗಳದ್ದೇ  ಅದ ಸಾಂಸ್ಕೃತಿಕ ಮಹತ್ವವಿದೆ. ‘ಚಿತ್ರಕಲಾ ಗ್ಯಾಲರಿಗಳ ವಾಸ್ತುಶಿಲ್ಪ ವಿನ್ಯಾಸ:ಒಂದು ವಿಶ್ಲೇಷಣೆ’, ಕಲಾತ್ಮಕ ರಂಗಭಿತ್ತಿ ಚಿತ್ರಗಳು, ರಂಗಭಿತ್ತಿ ಚಿತ್ರಿಗಳಲ್ಲಿ ಬಣ್ಣ ಮತ್ತು ಅಕ್ಷರ ವಿನ್ಯಾಸಗಳು, ಸಿನಿಮಾ ಮತ್ತು ಪೊಸ್ಟರ್, ಗುಲಬರ್ಗಾ ಜಿಲ್ಲೆಯ ದೃಶ್ಯಕಲಾ ಶಿಕ್ಷಣ ಬೆಳವಣಿಗೆ, ವಿಶ್ವವಿಖ್ಯಾತ ಕಲಾವಿದ ವಿನ್ಸಂಟ್ ವ್ಯಾನಗೋ, ಸರಳ ಕಲಾಜೀವಿ ಎಂ.ಬಿ.ಪಾಟೀಲ ಸೇರಿದಂತೆ ದೃಶ್ಯಕಲೆಗೆ ಸಂಬಂಧಿಸಿದ 10 ಲೇಖನಗಳು ಸಂಕಲನಗೊಂಡಿವೆ.

About the Author

ಪರಶುರಾಮ.ಪಿ

ಪರಶುರಾಮ ಪಿ. ಕಲಾಲೋಕ ಮತ್ತು ಸಾಹಿತ್ಯಲೋಕಗಳೆರಡರಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ದೃಶ್ಯ ಕಲಾವಿದರಾಗಿರುವ ಅವರು ಕಲೆಯ ಕುರಿತಾಗಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಕಲೆಯ ಬಗೆಗಿನ ನೂರೆಂಟು ಕೆಲಸಗಳನ್ನು ಮೈತುಂಬಾ ಹಚ್ಚಿಕೊಂಡು ಕುಂತಲ್ಲಿ ಕೂರದೆ, ನಿಂತಲ್ಲಿ ನಿಲ್ಲದೆ ಓಡಾಡುವ ಚಿತ್ರಕಲಾವಿದ, ರಂಗವಿನ್ಯಾಸಗಾರ, ರಂಗಭಿತ್ತಿಚಿತ್ರಗಳ ಸಂಗ್ರಾಹಕ ಮತ್ತು ಉತ್ತಮ ಕಲಾ ಸಂಘಟಕರಾಗಿರುವ ಪರಶುರಾಮ ಪಿ. ಅವರು ಕಲೆಯ ಸಾಧ್ಯತೆಗಳ ಕುರಿತು ಕೃತಿಗಳನ್ನು ರಚಿಸಿದ್ದಾರೆ. ಚಿತ್ರಕಲೆ ಸಾಹಿತ್ಯ ಮತ್ತು ರಂಗಭೂಮಿಗಳ ಅಂತರ್ ಸಂಬಂಧಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಪರಶುರಾಮ ಪಿ, ಅವರ ನೋಟ ವಿಶಿಷ್ಟವಾದದ್ದು. ದೃಶ್ಯಕಲೆಗೆ ಸಂಬಂಧಿಸಿದ ಬರಹಗಳ ಸಂಕಲನ 'ದೃಶ್ಯ ಮಂಥನ' ...

READ MORE

Related Books