ಕಲಾಕಂಪು

Author : ಮಲ್ಲಿಕಾರ್ಜುನ ಬಾಗೋಡಿ

Pages 60

₹ 200.00




Year of Publication: 2012
Published by: ಕೊತ್ತಲಬಸವೇಶ್ವರ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ
Address: ವಿಕಾಸ ಅಕಾಡೆಮಿ, ಕಮ್ಯೂನಿಟಿ ಕಾಲೇಜು, ಐವಾನ್-ಇ-ಶಾಹಿ ಗೆಸ್ಟಹೌಸ್ ಎದುರು ಗುಲಬರ್ಗಾ-585102

Synopsys

ಕಲಬುರಗಿಯ ವಿಕಾಸ ಅಕಾಡೆಮಿಯು 2010ರಲ್ಲಿ ’ಕಲಬುರ್ಗಿ ಕಂಪು’ ಮತ್ತು ಭಾರತ ವಿಕಾಸ ಸಂಗಮ-೩ ಎನ್ನುವ ವಿನೂತನ ಕಾರ್ಯಕ್ರಮವನ್ನು ಗುಲಬರ್ಗಾದ ಶಿವಶರಣಪ್ಪ ಉಪ್ಪಿನ ಅವರ ತೋಟದ ಆವರಣದಲ್ಲಿ  ಏರ್ಪಡಿಸಿತ್ತು.  ಸಿದ್ದೇಶ್ವರ ಸ್ವಾಮಿಗಳು ಮತ್ತು ಕೆ.ಎನ್. ಗೋವಿಂದಾಚಾರ್ ಅವರ ಮಾರ್ಗದರ್ಶನ, ಸಾವಿರಾರು ಸಂಘಟನೆಗಳ-ಹಲವಾರು ವ್ಯಕ್ತಿಗಳ ಸಮಾವೇಶದಲ್ಲಿ 10 ಲಕ್ಷಕ್ಕೂ ಮೀರಿದ ಜನ ಭಾಗವಹಿಸಿದ್ದರು.ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ರಾಮದೇವ ಬಾಬಾ, ಕೊಲ್ಹಾಪುರದ ಕನ್ಹೇರಿ ಆಶ್ರಮದ ಕಾಡಸಿದ್ದೇಶ್ವರ ಸ್ವಾಮಿಗಳು, ಅಯೋಧ್ಯಾ ಮತ್ತು ಮಥುರಾ ನಾಡಿನಿಂದ ಬಂದ ಸಂತರು, ಸೇವಾ ಪ್ರಮುಖರು, ಅಪೂರ್ವ ಸಾಧನೆಗೈದ ಶ್ರೇಷ್ಠರು ಭಾಗವಹಿಸಿದ್ದರು. ’ಕಲಬುರ್ಗಿ ಕಂಪು’ ಕಾರ್ಯಕ್ರಮದಲ್ಲಿ ಲಲಿತಕಲಾ ವಿಭಾಗವು ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಲಾವಿದ ಡಾ. ಮಲ್ಲಿಕಾರ್ಜುನ ಬಾಗೋಡಿ ಅವರು ಆ ಎಲ್ಲ ಕಾರ್ಯಕ್ರಮಗಳ ಮಾಹಿತಿಯನ್ನು ಈ  ’ಕಲಾ ಕಂಪು’ ಕೃತಿಯಲ್ಲಿ ಸೇರಿಸಿದ್ದಾರೆ.

About the Author

ಮಲ್ಲಿಕಾರ್ಜುನ ಬಾಗೋಡಿ
(10 June 1974)

ಕಲಬುರಗಿ ಜಿಲ್ಲೆಯ ಚಿತ್ತಾಪುರದವರಾದ ಡಾ. ಮಲ್ಲಿಕಾರ್ಜುನ ಬಾಗೋಡಿ ಅವರು ದೃಶ್ಯಕಲಾ ಸಾಹಿತ್ಯದ ಪ್ರಮುಖ ಲೇಖಕರು. ಸ್ವತಃ ಕಲಾವಿದರಾಗಿರುವ ಮಲ್ಲಿಕಾರ್ಜುನ ಅವರು ಸದ್ಯ ಗುಲ್ಬರ್ಗ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ. ಸುರಪುರದ ಚಿತ್ರಕಲೆ ಕುರಿತು ಮಂಡಿಸಿದ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ದೊರೆತಿದೆ. ...

READ MORE

Related Books