’ದೃಷ್ಟಿ ಸೃಷ್ಟಿ’ ಕಲಾವಿದ ಶಿವಾನಂದ ಬಂಟನೂರು ಅವರು ಬರೆದ ಚಿತ್ರಕಲೆ ಕುರಿತಾದ ಆಯ್ದ ಹದಿಮೂರು ಲೇಖನಗಳ ಸಂಗ್ರಹ. ಚಿತ್ರಕಲೆಯ ಪ್ರಾಚೀನತೆ, ಆರಂಭಿಕ ಸಿದ್ಧಾಂಗಳು, ಚಿತ್ರಕಲೆಯ ಉಗಮ, ವಿಕಾಸದ ಕುರಿತಾದ ವಿವರಣಾತ್ಮಕ ಬರಹಗಳು ಕೃತಿಯಲ್ಲಿವೆ. ಕಲೆಯ ಮೂರು ಆಯಾಮಗಳಾದ ರಚನೆ, ಆಸ್ವಾದನೆ, ವಿಮರ್ಶೆ ಗಳ ಬಗ್ಗೆಯೂ ಇಲ್ಲಿ ಲೇಖನಗಳಿವೆ. ಕಲೆಗಾರ ಹಾಗೂ ವಿಮರ್ಶಕರ ನಡುವಿನ ಸಂಬಂಧ, ಕಲೆಯ ಆಸ್ವಾದನೆ ಹಾಗೂ ಮಾನಸಿಕ ಸ್ಥಿತಿಗಳ ನಡುವಿನ ಸಂಬಂಧ ಕುರಿತು ಇಲ್ಲಿನ ಲೇಖನಗಳು ಚರ್ಚಿಸುತ್ತವೆ.
©2025 Book Brahma Private Limited.