ದೇವನಹಳ್ಳಿಯ ಶಿಲ್ಪಕಲಾ ಶಾಲೆಯ ಎ.ಸಿ. ಹನುಮಂತಾಚಾರ್ಯ ಅವರು ಶಿಲ್ಪಕಲಾ ಕ್ಷೇತ್ರದಲ್ಲಿ ದೊಡ್ಡ ಹೆಸರು. ಗುರುಕುಲ ಪದ್ಧತಿಯಲ್ಲಿ ಶಿಲ್ಪಕಲೆಯನ್ನು ಕಲಿಸುವ ಮೂಲಕ ಸಾಂಪ್ರದಾಯಿಕ ಶಿಲ್ಪ ಕಲಾವಿದರ ಸಮೂಹ ಸೃಷ್ಟಿಗೆ ಕಾರಣವಾದ ದೇವನಹಳ್ಳಿ ಶಿಲ್ಪಕಲಾ ಶಾಲೆಗೆ ಒಂದು ಸಾಂಸ್ಕೃತಿಕ ಮಹತ್ವ ಇದೆ. ಎ.ಸಿ. ಹನುಮಂತಾಚಾರ್ಯ ಅವರ ತಂದೆ ದೇವನಹಳ್ಳಿ ಚೆನ್ನಕೇಶವ ಆಚಾರ್ಯರ ರೇಖಾಚಿತ್ರಗಳು ಮೊದಲ ಬಾರಿಗೆ ಸಾರ್ವಜನಿಕರ, ಕಲಾಸಕ್ತರ ಕಣ್ಣಿಗೆ ಗೋಚರವಾಗುತ್ತಿವೆ.
ಶಿಲ್ಪ ಸಿದ್ಧಾಂತಿ, ಶಿಲ್ಪವಲ್ಲಭ, ಶಿಲ್ಪವಿದ್ವಾನ್ ಬಿರುದುಗಳಿಗೆ ಪಾತ್ರರಾಗಿದ್ದ ಚೆನ್ನಕೇಶವ ಆಚಾರ್ಯರು ಸಂಪ್ರದಾಯ ಮತ್ತು ಶಾಸ್ತ್ರಬದ್ಧವಾಗಿ ರೇಖಾಚಿತ್ರಗಳು ಹನುಮಂತಾಚಾರ್ಯ ಅವರ ಕುಟುಂಬದವರ ಸಂಗ್ರಹದಲ್ಲಿದ್ದವು. ಅವುಗಳನ್ನು ಸಂಗ್ರಹಿಸಿ, ಸಂಪಾದಿಸಿ, ಸೂಕ್ತ ಟಿಪ್ಪಣಿ ಬರೆದು ಪ್ರಕಟಿಸುವ ಮೂಲಕ ಕೆ.ವಿ. ಸುಬ್ರಹ್ಮಣ್ಯಂ ಅವರು ಅಪರೂಪದ ಕೆಲಸ ಮಾಡಿದ್ದಾರೆ.
ರೇಖಾ ರಾಮಾಯಣ ಸಂಪುಟದಲ್ಲಿ ರಾಮಸಂಬಂಧಿತ ರೇಖಾಚಿತ್ರಗಳಿವೆ. ವಿಶೇಷವೆಂದರೆ ಚೆನ್ನಕೇಶವ ಆಚಾರ್ಯರು ಸಪ್ತಸಾಗರಗಳನ್ನು ರೇಖೆಗಳಲ್ಲಿ ಗ್ರಹಿಸಿರುವ ರೀತಿ ಮತ್ತು ಕಿಷ್ಕಿಂದಾ ಕಾಂಡದ ಹಲವು ಚಿತ್ರಗಳು ದುಂಡುತನದ ಜತೆಜತೆಗೆ ವಿಶಿಷ್ಟ ರೇಖೆ, ರೂಪ ಪ್ರಮಾಣಗಳನ್ನು ಅರಗಿಸಿಕೊಂಡು ಉಬ್ಬುಶಿಲ್ಪ ಸೃಷ್ಟಿಗೆ ಹೊಂದುವಂತಿರುವ ನಿರ್ವಹಣೆಗಳು ಗಮನಾರ್ಹವಾಗಿವೆ. ದೇಶವಿದೇಶಗಳ ಹಲವು ರಾಮಾಯಣಗಳ ಜೊತೆಗೆ ಇದೂ ಒಂದು ರಾಮಾಯಣ. ರೇಖಾ ರಾಮಾಯಣ
©2024 Book Brahma Private Limited.