ಪರಶುರಾಮ ಪಿ. ಕಲಾಲೋಕ ಮತ್ತು ಸಾಹಿತ್ಯಲೋಕಗಳೆರಡರಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ದೃಶ್ಯ ಕಲಾವಿದರಾಗಿರುವ ಅವರು ಕಲೆಯ ಕುರಿತಾಗಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಕಲೆಯ ಬಗೆಗಿನ ನೂರೆಂಟು ಕೆಲಸಗಳನ್ನು ಮೈತುಂಬಾ ಹಚ್ಚಿಕೊಂಡು ಕುಂತಲ್ಲಿ ಕೂರದೆ, ನಿಂತಲ್ಲಿ ನಿಲ್ಲದೆ ಓಡಾಡುವ ಚಿತ್ರಕಲಾವಿದ, ರಂಗವಿನ್ಯಾಸಗಾರ, ರಂಗಭಿತ್ತಿಚಿತ್ರಗಳ ಸಂಗ್ರಾಹಕ ಮತ್ತು ಉತ್ತಮ ಕಲಾ ಸಂಘಟಕರಾಗಿರುವ ಪರಶುರಾಮ ಪಿ. ಅವರು ಕಲೆಯ ಸಾಧ್ಯತೆಗಳ ಕುರಿತು ಕೃತಿಗಳನ್ನು ರಚಿಸಿದ್ದಾರೆ. ಚಿತ್ರಕಲೆ ಸಾಹಿತ್ಯ ಮತ್ತು ರಂಗಭೂಮಿಗಳ ಅಂತರ್ ಸಂಬಂಧಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಪರಶುರಾಮ ಪಿ, ಅವರ ನೋಟ ವಿಶಿಷ್ಟವಾದದ್ದು. ದೃಶ್ಯಕಲೆಗೆ ಸಂಬಂಧಿಸಿದ ಬರಹಗಳ ಸಂಕಲನ 'ದೃಶ್ಯ ಮಂಥನ' ಕಲೆಯ ಕುರಿತು ಅವರಿಗಿರುವ ಅಪಾರ ಒಲವನ್ನು ಸೂಚಿಸುತ್ತಗೆ.