ವ್ಯಂಗ್ಯಚಿತ್ರಕಾರ ಈರಣ್ಣ ಬೆಂಗಾಲಿ ಅವರ ಎರಡನೇಯ ವ್ಯಂಗ್ಯಚಿತ್ರ ಸಂಕಲನ ಬೆಂಗಾಲಿ ರೇಖೆಗಳು. ಈ ಸಂಕಲನದಲ್ಲಿ ಅವರ ಇನ್ನೂರು ವ್ಯಂಗ್ಯಚಿತ್ರಗಳಿವೆ. ವ್ಯಂಗ್ಯಚಿತ್ರಗಳಲ್ಲಿ ಹಲವು ಪ್ರಕಾರಗಳಿವೆ. ಪಾಕೆಟ್ ಕಾರ್ಟೂನ್, ಸಂಪಾದಕೀಯ ಕಾರ್ಟೂನ್‌ಗಳು, ಸಿಪ್ ಕಾರ್ಟೂನ್‌ಗಳು ಎಂದು ಪತ್ರಿಕೆಗಳಲ್ಲಿ ಪ್ರಕಟವಾಗುವ ಇವು ತಮ್ಮದೇ ವೈಶಿಷ್ಟ್ಯತೆ ಹೊಂದಿವೆ. ಈರಣ್ಣ ಬೆಂಗಾಲಿ ತಮ್ಮ ವ್ಯಂಗ್ಯ, ವಿಡಂಬನೆಯ ಅಭಿವ್ಯಕ್ತಿಗೆ ಪಾಕೆಟ್ ಕಾರ್ಟೂನ್‌ಗಳನ್ನು ನೆಚ್ಚಿಕೊಂಡಿದ್ದಾರೆ. ಸಮಾಜದ ಓರೆಕೋರೆಗಳನ್ನು , ಅಂಕು ಡೊಂಕಿನ ರೇಖೆಗಳನ್ನು ಅಡಿಬರಹಗಳೊಂದಿಗೆ ತುಂಬಾ ವಿಡಂಬನಾತ್ಮಕವಾಗಿ, ಸೊಗಸಾಗಿ ಚಿತ್ರಿಸುವಲ್ಲಿ ಬೆಂಗಾಲಿ ಅವರ ಪ್ರಯತ್ನ ಮೆಚ್ಚುವಂತದ್ದು.
©2025 Book Brahma Private Limited.