‘ದೃಶ್ಯ ಕಲಾ ಪ್ರಪಂಚ’ ಕೃತಿಯು ಎನ್. ಮರಿಶಾಮಾಚಾರ್ ಅವರ ಲೇಖನಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಎಚ್.ಎ.ಅನಿಲ್ ಕುಮಾರ್ ಅವರು, `ಸಮಗ್ರವಾಗದಿದ್ದರೂ ಸಂಕ್ಷಿಪ್ತವಾಗಿಯಾದರೂ, ಪ್ರಪಂಚದ ದೃಶ್ಯಕಲೆಯ ಬಗ್ಗೆ ಪುಸ್ತಕ ಬರೆಯಬೇಕು ಎನ್ನುವುದು ನನ್ನ ಬಹುದಿನದ ಕನಸು‘ ಎಂದು ಮೊದಲ ಮಾತಿನಲ್ಲಿ ಹೇಳಿಕೊಂಡಿರುವ ಕಲಾವಿದ ಮರಿಶಾಮಾಚಾರ್ ಅವರ ಇಪ್ಪತ್ತನೆಯ ಪುಸ್ತಕ ಇದಾಗಿದೆ. ಅವರದೇ ರಕ್ಷಪುಟ ಹಾಗೂ ಒಳಪುಟ ವಿನ್ಯಾಸದೊಂದಿಗೆ ಸುಂದರವಾಗಿ ಸಜ್ಜಾಗಿದೆ ಹಾಗೂ ಕಲಾವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಅಲಭ್ಯವಾಗಿರುವ ಪುಸ್ತಕಗಳ ಕೊರತೆಯನ್ನು ತುಂಬಿಕೊಡುವಂತಿದೆ. `ಕಲೆ ಎಂದರೇನು? ಕಲೆಯ ಹುಟ್ಟಿಗೆ ಮುನ್ನ ಇದ್ದ ದೃಶ್ಯ ಸೃಷ್ಟಿಗಳಾವುವು? `ಕಲೆಯ ಸಾವಿನ‘ ನಂತರ ದೃಶ್ಯಕಲೆ ಹಾಗೂ ಅದರ ವ್ಯಾಖ್ಯೆ-ವಾಚ್ಯಾರ್ಥಗಳು ಬೆರೆತ ತತ್ವಾಧಾರಿತ ಕಲೆಯ ವಿಶ್ವರೂಪವು ಹೇಗೆ ಮಾನವಶಾಸ್ತ್ರೀಯ ಗುಣ ಹೊಂದಿವೆ? ಮುಂತಾದ ವಿಷಯಗಳ ಕುರಿತು ಸಂಕ್ಷಿಪ್ತವಾಗಿ, ಸೂಕ್ತವಾಗಿ ಬರೆಯಲಾಗಿರುವ ಈ ಪುಸ್ತಕ, ಲೇಖಕರ ಅಷ್ಟೂ ಲೇಖನಗಳ ಶೈಲಿಗಳ, ಆಸಕ್ತಿ-ನಿಲುವು-ತತ್ವಾದರ್ಶಗಳ ಸಂಗ್ರಹ ರೂಪದಂತಿದೆ‘ ಎಂದಿದ್ದಾರೆ.
©2024 Book Brahma Private Limited.