ವಚನ ಚಿತ್ತಾರ

Author : ಜಿ.ಕೆ. ಶಿವಣ್ಣ

Pages 104

₹ 200.00




Year of Publication: 2012
Published by: ಪಾರ್ವತಮ್ಮ ಕೆ.
Address: ನಂ 599, 4 ನೇ ಕ್ರಾಸ್, 7 ನೇ ಮುಖ್ಯ ರಸ್ತೆ, ಪೂರ್ಣಚಂದ್ರ ಲೇಔಟ್, ಶ್ರೀಗಂಧಕವಲ್, ಬೆಂಗಳೂರು -560091
Phone: 8550073596

Synopsys

ಕಾವ್ಯದೊಳಗಣ ರಸಭಾವಗಳು ಮನಸ್ಸಿಗೆ ಮುದ ನೀಡುವಷ್ಟೇ ಪ್ರಮಾಣದಲ್ಲಿ ಚಿತ್ರಕಲೆಯೂ ಮನಸ್ಸನ್ನು ಆನಂದಗೊಳಿಸುತ್ತದೆ ಹಾಗೂ ಚಿತ್ರಕ್ಕೆ ಭಾಷೆಯ ಮಿತಿಯಿರುವುದಿಲ್ಲ ಎಂಬುದನ್ನು ಕಾಣಬಹುದಾಗಿದೆ. ಈ ಕೃತಿಯಲ್ಲಿ ವಿಶೇಷವಾಗಿ ಜನಪ್ರಿಯ ವಚನಗಳಿಗೆ ರೇಖಾಚಿತ್ರದ ಮೂಲಕ ಲೇಖಕ ಜಿ.ಕೆ. ಶಿವಣ್ಣ ಅವರು ವ್ಯಾಖ್ಯಾನಗಳನ್ನು ನೀಡಿದ್ದಾರೆ. ತಮ್ಮದೇ ಶೈಲಿಯಲ್ಲಿ ವಚನಗಳ ಅಮೂರ್ತ ಅರ್ಥ ಗೌರವಗಳಿಗೆ ಮೂರ್ತ ರೂಪ ನೀಡಿದ್ದು ಕೃತಿಯ ಹೆಗ್ಗಳಿಕೆ. 

About the Author

ಜಿ.ಕೆ. ಶಿವಣ್ಣ

ಶರಣ ಹಾಗೂ ದಾಸ ಸಾಹಿತ್ಯ ಅಧ್ಯಯನ ಮಾಡಿರುವ ಜಿ. ಕೆ. ಶಿವಣ್ಣ ಅವರು 90ರ ದಶಕದಲ್ಲಿಯೇ ಶರಣರ ವಚನಗಳಿಗೆ ಮೊದಲ 100 ಚಿತ್ರಗಳ ಸರಣಿ ರಚಿಸಿದವರು. ದಾಸ ಸಾಹಿತ್ಯಕ್ಕೂ ಅನೇಕ ಕಲಾಕೃತಿಗಳನ್ನು ರಚಿಸಿದ್ದಾರೆ. ನಾಡಿನಾದ್ಯಂತ ಏಕವ್ಯಕ್ತಿ ಪ್ರದರ್ಶನ ನೀಡಿ ರೇಖಾಚಿತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದು, ಜಲವರ್ಣದ ವಾಷ್ ತಂತ್ರದಲ್ಲಿ ಪರಿಣಿತರು. ಸಾಹಿತ್ಯ, ಸಂಗೀತ ನಾಟಕ, ಸಿನಿಮಾ ಅವರ ಆಸಕ್ತಿಯ ಕ್ಷೇತ್ರಗಳು. ಸುಧಾ, ತರಂಗ, ಮಯೂರ, ಪ್ರಜಾವಾಣಿ, ಉದಯವಾಣಿ ಪತ್ರಿಕೆಗಳಲ್ಲಿ ಅವರ ಕಲಾಕೃತಿಗಳು ಪ್ರಕಟವಾಗಿವೆ. ಕಲೆಗೆ ಸಂಬಂಧಿಸಿದ ಅವರ ಅನೇಕ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ...

READ MORE

Related Books