ಲೇಖಕ ಹಾಗೂ ವ್ಯಂಗ್ಯಚಿತ್ರ ಕಲಾವಿದ ಜಿ.ವಿ. ಗಣೇಶಯ್ಯ ಅವರ ಕೃತಿ-ವ್ಯಂಗ್ಯಚಿತ್ರ ರಚಿಸುವುದು ಹೇಗೆ?. ಮಕ್ಕಳು ಗೋಡೆಯ ಮೇಲೆ ಅಡ್ಡಾದಿಡ್ಡಿಯಾಗಿ ರೇಖೆಗಳನ್ನು ಬರೆಯುತ್ತಾರೆ. ಗೋಡೆ ಹಾಳು ಮಾಡುತ್ತಾನೆ ಎಂದು ಪಾಲಕರು ಚಿಂತಿಸುತ್ತಾರೆ. ಆದರೆ, ಮಗುವಿನ ಪ್ರತಿಭೆಗೆ ಒಂದು ಮಾರ್ಗ ಕಂಡುಕೊಳ್ಳುವ ಸಮಯವದು. ಇಂತಹ ಗೆರೆಗಳನ್ನು ನೋಟ್ ಬುಕ್ ನಲ್ಲಿ ಬರೆಯಲು ಪ್ರೇರೇಪಿಸಬೇಕು. ಅವರ ಪ್ರತಿಭೆ ಹೊರ ಬರಲು ಸಾಧ್ಯವಾಗುತ್ತದೆ. ಬರೆಯುವ ರೇಖೆಗಳನ್ನು ಹೇಗೆ ಬರೆಯಬೇಕು ಎಂಬ ಮಾರ್ಗದರ್ಶನ ಸಿಕ್ಕರೆ ಮಗುವಿನಲ್ಲಿ ಪ್ರತಿಭೆ ಮತ್ತಷ್ಟು ಅರಳುತ್ತದೆ. ಈ ಹಿನ್ನೆಲೆಯಲ್ಲಿ, ವ್ಯಂಗ್ಯಚಿತ್ರಗಳನ್ನು ಹೇಗೆ ಬರೆಯಬೇಕು ಎಂಬಿತ್ಯಾದಿ ಅಂಶಗಳ ಬಗ್ಗೆ ಲೇಖಕರು ಅತ್ಯಂತ ಸರಳವಾಗಿ ವಿವರಿಸಿದ್ದಾರೆ. ವ್ಯಂಗ್ಯಚಿತ್ರ ಬರೆಯುವ ಆಸಕ್ತ ಮಕ್ಕಳಿಗೂ, ಪಾಲಕರಿಗೂ ಈ ಕೃತಿ ಪ್ರಯೋಜಕಾರಿ.
©2025 Book Brahma Private Limited.