ಕಲಾಕೋಶ

Author : ಎನ್. ಮರಿಶಾಮಾಚಾರ್

Pages 154

₹ 100.00




Year of Publication: 1994
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: ನೃಪತುಂಗ, ಬೆಂಗಳೂರು- 560002

Synopsys

‘ಕಲಾಕೋಶ’ ಕಲಾಲೋಕದ ಕುರಿತು ಬರೆದ ಲೇಖನಗಳ ಸಂಕಲನ. ಈ ಕೃತಿಯನ್ನು ಕರ್ನಾಟಕ ಲಲಿಲಕಲಾ ಅಕಾಡೆಮಿ ಪ್ರಕಟಸಿದೆ. ಪಿ. ಆರ್. ತಿಪ್ಪೇಸ್ವಾಮಿ ಮುಖ್ಯ ಸಂಪಾದಕರಾಗಿದ್ದರೆ, ಕಲಾವಿದ ಲೇಖಕರಾದ, ಎನ್. ಮರಿಶಾಮಚಾರ್, ಡಾ. ಅ.ಲ. ನರಸಿಂಹನ್, ವಿ.ಟಿ. ಕಾಳೆ, ಡಾ. ಬಿ.ಕೆ. ಹಿರೇಮಠ್ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಕಲಾವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ಕೈಪಿಡಿ.

About the Author

ಎನ್. ಮರಿಶಾಮಾಚಾರ್
(15 May 1951 - 03 April 2013)

ಕರ್ನಾಟಕದ ಕಲಾವಲಯದ ಹಿರಿಯರು ’ಮರಿ’ ಎಂದು ಕರೆಯುತ್ತಿದ್ದ ಎನ್. ಮರಿಶಾಮಾಚಾರ್‌ ಅವರು ರಾಜ್ಯದ ಅಪರೂಪದ ಕಲಾಪರಿಚಾರಕ-ಲೇಖಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್‌  ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮರಿಶಾಮಾಚಾರ್‌ ಅವರು ಕಲಾಸಾಹಿತಿ. ’ನಡೆದಾಡುವ ಕಲಾಕೋಶ’ ಎಂದು ಕಲಾವಲಯದಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು. ವಿಜಯಪುರದಲ್ಲಿ 1951ರ ಮೇ 15ರಂದು ಜನಿಸಿದ ಮರಿಶಾಮಾಚಾರ್‌ ಅವರು ಜಯನಗರದ ಆರ್‌.ವಿ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಡ್ರಾಯಿಂಗ್ ಮಾಡಲು ಆರಂಭಿಸಿದ್ದರು. ಅವರ ಅಣ್ಣ ಕೆನ್‌ ಶಾಲೆಯ ವಿದ್ಯಾರ್ಥಿಯಾಗಿದ್ದ. ಕಲೆಯ ಅಭಿರುಚಿ ಬಂದದ್ದು ಅವರ ಅಣ್ಣನಿಂದಲೇ. ಅಣ್ಣನ ಮೂಲಕ ಪರಿಚಯವಾದ ಕಲಾಗುರು ಆರ್‌.ಎಂ. ಹಡಪದ ಅವರ ಶಿಷ್ಯರಾಗಿದ್ದ ’ಮರಿ’ ಅವರು ಅವರ ಬಳಿ ಐದು ವರ್ಷ ...

READ MORE

Related Books