ಕವಿ ಹಾಗೂ ಕಲಾವಿದ ಬಾಗೂರು ಮಾರ್ಕಾಂಡೇಯ ಅವರು ಬರೆದ ಕೃತಿ-ರೇಖೆಗಳು. ಇದು ಚಿತ್ರಕಲೆಯ, ರೇಖೆಗಳ ಕುರಿತಾದ ಪುಸ್ತಕ. ನನ್ನ ಅನುಭವವನ್ನು ನಾನು ಕಲಿತು ಅಭಿವ್ಯಕ್ತಿಸುವುದನ್ನು ಇನ್ನಿತರರು ಕಲಿತುಕೊಳ್ಳಬೇಕು ಎಂಬ ಆಶಯದಿಂದ ಈ ಕೃತಿ ರಚಿಸಲಾಗಿದೆ.
ಚಿತ್ರಕಲೆಯಲ್ಲಿ ರೇಖೆಗಿರುವ ಮಹತ್ವವನ್ನು ಸಾರಲೆಂದೇ ಈ ರೇಖೆಗಳು ಪುಸ್ತಕ ಬರೆದು ರೇಖೆಗಳಲ್ಲಿನ ಪ್ರಕಾರಗಳು ಅವುಗಳು ಚಿತ್ರಾಕೃತಿಯಾಗುವ ವಿಸ್ಮಯವನ್ನು ನಿರೂಪಿದ್ದೇನೆ. ಬಿಂದು ರೇಖೆಯಾಗುವುದು, ರೇಖೆ ಆಕಾರಗಳನ್ನು ಪಡೆದಾಗ ಚಿತ್ರವಾಗುವುದು, ಚಿತ್ರ ಅರ್ಥಗಳನ್ನು ಪ್ರತಿಧ್ವನಿಸುವುದು. ಭಾವ ಭಾಷೆಯ ಅಂತರಂಗವನ್ನು ಕೆಲವೇ ರೇಖೆಗಳ ಮೂಲಕ ಪ್ರತಿಫಲಿಸುವುದು, ವಿಶೇಷ ಅರ್ಥವನ್ನು ನೋಡುಗನಿಗೆ ಸವಾಲೆನಿಸುವಂತೆ ತೋರುವುದು... ಹೀಗೆ ರೇಖೆಗಳ ಭಾವಯಾನವನ್ನು ಅವುಗಳ ವಿಶಿಷ್ಟ ವ್ಯಾಪಕತೆಯನ್ನು ಅನಾವರಣಗೊಳಿಸಿರುವ ವಿಶಿಷ್ಟ ಕೃತಿ.
©2024 Book Brahma Private Limited.