ಸುರಪುರದ ಪ್ರಭು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ನೀಡಿದ ’ಸಗರನಾಡಿನ ದೃಶ್ಯಕಲೆ’ ಕುರಿತಾದ ಪ್ರಬಂಧದ ವಿಸ್ತೃತ ರೂಪ ಈ ಕಿರು ಹೊತ್ತಿಗೆ.
ಕೃಷ್ಣಾ-ಭೀಮಾ ನದಿಗಳ ನಡುವಿನ ಪ್ರದೇಶವನ್ನು ಸಗರನಾಡು ಎಂದು ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ಸಂಸ್ಥಾನವನ್ನು ಸ್ಥಾಪಿಸಿ ರಾಜ್ಯಭಾರ ಮಾಡಿದ ಸುರಪುರ ನಾಯಕರಿಂದಾಗಿ ಸಗರನಾಡನ್ನು ಸುರಪುರ ನಾಡೆಂತಲೂ ಕರೆಯಲಾಗುತ್ತದೆ. ಬಯಲು ಸೀಮೆಯೊಂದಿಗೆ ಬೆಟ್ಟಗುಡ್ಡಗಳ ಸಾಲುಗಳ ಮಧ್ಯೆ ಇರುವ ಈ ಪ್ರದೇಶ ನೋಡಲು ಬಲು ಸುಂದರ. ಸಾಂಸ್ಕೃತಿಕವಾಗಿಯೂ ಈ ಪ್ರದೇಶ ಶ್ರೀಮಂತ ವಲಯ ಎನಿಸಿಕೊಂಡಿದೆ. ಬಿಜಾಪೂರದ ಆದಿಲ್‌ಷಾಹಿಗಳು, ಬಹಮನಿ ಸುಲ್ತಾನರು ಮತ್ತು ಸುರಪುರ ನಾಯಕ ಮನೆತನದವರು ಕಲೆಗಳಿಗೆ ವಿಶೇಷ ಮನ್ನಣೆಯನ್ನು ನೀಡಿರುವರು. ರಾಜಾಶ್ರಯ ತಪ್ಪಿದ ಮೇಲೆ ಮಠಾಧೀಶರು, ಶ್ರೀಮಂತ ವ್ಯಕ್ತಿಗಳು ಇಲ್ಲವೆ ಅಧಿಕಾರಿ ವರ್ಗದವರು ಈ ಭಾಗದಲ್ಲಿನ ವಿವಿಧ ಪ್ರಕಾರದ ಕಲೆಗಳನ್ನು ಪೋಷಿಸಿಕೊಂಡು ಬಂದಿರುವರು. ಒಂದೊಮ್ಮೆ ಈ ಭಾಗದಲ್ಲಿ ನೇಯ್ಗೆ ಕಲೆಯೂ ವಿಶೇಷವಾಗಿ ಕಾಣಿಸಿಕೊಂಡಿದೆ. ರಂಗಂಪೇಟೆ, ರುಕ್ಮಾಪುರ, ಗೋಗಿ ಮತ್ತಿತರ ಗ್ರಾಮಗಳಲ್ಲಿ ತಾಳಮಂಡಲ, ಮೋತಿಚುರಿ ಹೆಸರುಳ್ಳ ಕಲಾತ್ಮಕ ವಿನ್ಯಾಸದ ಸೀರೆಗಳನ್ನು ನೇಯಲಾಗುತ್ತಿದೆ. ಹಾಗೆಯೇ ಈ ಭಾಗದ ಗೋನಾಳ, ಗಾಜರಕೋಟ ಮತ್ತಿತರೆಡೆ ಸುಂದರವಾದ ಕುದುರೆ ಶಿಲ್ಪಗಳನ್ನು ನಿರ್ಮಿಸಲಾಗುತ್ತಿದೆ. ಈ ವೃತ್ತಿಪರ ಕುಶಲಕರ್ಮಿಗಳು ಒಂದೊಮ್ಮೆ ಸುರಪುರ ಅರಸರ ಪೋಷಣೆಯೊಂದಿಗೆ ತಮ್ಮ ಕಸುಬನ್ನು ಕಲೆಯಾಗಿಸಿಕೊಂಡದ್ದೂ ಉಂಟು. ಇಂಥ ಇನ್ನೂ ಅನೇಕ ವಿಷಯಗಳನ್ನು ಅತ್ಯಂತ ವಿವರವಾಗಿ ಕಟ್ಟಿಕೊಡಲಾಗಿದೆ.
©2024 Book Brahma Private Limited.