‘ಕಾಮತರ ಕುಂಚ ಪ್ರಪಂಚ’ ಕೃತಿಯು ಕೃಷ್ಣಾನಂದ ಅವರು ಬಿಡಿಸಿದ ಚಿತ್ರಗಳ ಸಂಕಲನವಾಗಿದೆ. ಕೃತಿಯ ಪ್ರಸ್ತಾವನೆಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : ಕೃಷ್ಣಾನಂದ ಕಾಮತರು ಹುಟ್ಟಾ ನಿಸರ್ಗಪ್ರಿಯರು. ಅವರ ಹುಟ್ಟೂರಾದ ಹೊನ್ನಾವರದ ಶರಾವತಿ ನದಿ ಕಡಲು ಮತ್ತು ಕಡಲಿಗೇ ನುಗ್ಗಿದಂತಿದ್ದ ಸಹ್ಯಾದ್ರಿಯ ಅಂಚುಗಳೆಲ್ಲ ಅವರ ಸೌಂದರ್ಯಾರಾಧನೆಗೆ ನೀರೆರೆದಿದ್ದವು. ಮನುಷ್ಯರಿಗಿಂತ ಅವರಿಗೆ ಪಶು-ಪಕ್ಷಿ, ಹುಳ-ಹುಪ್ಪಡಿ, ಗಿಡಮರ, ಎಲೆ, ಹೂಗಳೇ ಹೆಚ್ಚು ಪ್ರಿಯವಾಗಿದ್ದವು. ನಿಸರ್ಗದೊಂದಿಗೆ ಒಂದಾಗಿ ಬದುಕುವ ಆದಿವಾಸಿಗಳು ಅವರಿಗೆ ನಗರವಾಸಿಗಳಿಗಿಂತ ಹತ್ತಿರದವರೆನಿಸಿದ್ದರು. ಅವರ ಜಿಲ್ಲೆ, ಉತ್ತರ ಕನ್ನಡವು ವಿವಿಧ ಬುಡಕಟ್ಟು ಜನಾಂಗಗಳ ನೆಲೆಯೂ ಹೌದು, ಹಾಲಕ್ಕಿ, ಗೊಂಡ, ಗಾಮೊಕ್ಕಲು, ಕುಡುಬಿ, ಸಿದ್ದಿಗಳನ್ನು ನೋಡುತ್ತಲೇ ಬೆಳೆದವರು ಕಾಮತರು. ಪರಿಸರ ವಿಜ್ಞಾನದಲ್ಲಿ ವಿಶ್ವದಲ್ಲೇ ಹೆಸರು ಮಾಡಿದ ಮಹಾವಿದ್ಯಾಲಯದಿಂದ ಕೀಟಶಾಸ್ತ್ರ ಮತ್ತು ಸಿರೆಕ್ಯೂಟ್ ಅರಣ್ಯ ರಕ್ಷಣೆಗಳಲ್ಲಿ ವಿಶೇಷ ಅಧ್ಯಯನ ಮಾಡಿ ಬಂದ ಕಾಮತರಿಗೆ ಈ ದೇಶದಲ್ಲಿ ಒಂದು ಚಿಕ್ಕ ನೌಕರಿಯೂ ಸಿಗದಿದ್ದಾಗ ಅವರು ಸ್ವಂತ ವೈಜ್ಞಾನಿಕ ಫೋಟೋ ಲ್ಯಾಬೋರೇಟರಿ ತೆಗೆದರು (1971), 1976ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯು ನೆರೆರಾಜ್ಯವೊಂದಕ್ಕೆ ಹೋಗಿ ಒಂದು ವರ್ಷ ಕಾಲ ವಾಸಿಸಿ, ಅಲ್ಲಿನ ಜನಜೀವನ, ರೂಢಿ, ಸಂಪ್ರದಾಯಗಳು, ಕಲೆಗಳು, ಇತ್ಯಾದಿ ಕುರಿತು ಪರಿಚಯ ಗ್ಗಂಥ ಬರೆಯಲು ಸಾಹಿತಿಗಳನ್ನು ಪ್ರೋತ್ಸಾಹಿಸಲು ಶಿಷ್ಯವೇತನವನ್ನು ಘೋಷಿಸಿತು ಎಂದು ಇಲ್ಲಿ ವಿವರಿಸಿದ್ದಾರೆ.
ಒಂದು ವರ್ಷ ಹೊರರಾಜ್ಯ ಪ್ರವಾಸ ಮಾಡಿ, ಅಧ್ಯಯನದ ಕೃತಿಯೊಂದನ್ನು ಬರೆದುಕೊಡಲು 12 ಸಾವಿರ ರೂಪಾಯಿಗಳು, ವರ್ಷಪೂರ್ತಿ ಅಧ್ಯಯನ ಕುರಿತ ಗ್ರಂಥ ನಿರ್ಮಾಣವೇ ಈ ಯೋಜನೆಯ ಉದ್ದೇಶವಾಗಿತ್ತೆಂಬುದರಲ್ಲಿ ಸಂದೇಹವಿರಲಿಲ್ಲ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಅಧ್ಯಯನಕಾರನು ತನ್ನ ಅಧ್ಯಯನಕ್ಕೆ ಯಾವ ರಾಜ್ಯವನ್ನಾದರೂ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಲೇಖಕರಿಗೇ ಕೊಟ್ಟಿತ್ತು. ಯಾರೇ ಆದರೂ ಸಾರಿಗೆ ಆಧುನಿಕ ಸಲಕರಣೆಗಳು ವಿಶ್ವವಿದ್ಯಾಲಯ, ಉಳಿದುಕೊಳ್ಳಲು ವ್ಯವಸ್ಥಿತ ನಿವಾಸ ಇರುವ ರಾಜ್ಯವನ್ನೇ ಆಯ್ದು ಕೊಳ್ಳುತ್ತಿದ್ದರೇನೋ! ಆ ಘೋಷಣೆಗೆ ಯಾರ್‍ಯಾರು ಸಂಧಿಸಿದರೋ ಗೊತ್ತಿಲ್ಲ. ಆದರೆ ಕಾಮತರಿಗೆ ಸಿಕ್ಕಿತು. ಅವರು ಆರಿಸಿದ್ದು ಹಿಂದುಳಿದ ಅತಿದೊಡ್ಡ ರಾಜ್ಯವಾಗಿದ್ದ ಮಧ್ಯಪ್ರದೇಶವನ್ನು ಭಾರತದ ಬುಡಕಟ್ಟು ನಿವಾಸಿಗಳ ಶೇ. 38ರಷ್ಟು ಜನಸಂಖ್ಯೆ ಇದ್ದ ನೆಲೆವೀಡನ್ನು ಕಾಮತರು ಆಯ್ಕೆ ಮಾಡಿಕೊಂಡರು. ಸಾರಿಗೆಯ ಅನುಕೂಲ, ವಿದ್ಯುತ್ತು ಮತ್ತಿತರ ನಾಗರಿಕ ಸೌಕರ್ಯಗಳು ಹೋಗಲಿ, ಕುಡಿಯಲು ಸ್ವಚ್ಛ ನೀರೂ ಸಿಗದ ಗ್ರಾಮಾಂತರ ಪ್ರದೇಶವೇ ಭೂಯಿಷ್ಟವಾದ ನಾಡದು. ಆಗ, ಬೆಂಗಳೂರು ಭೂಲೋಕದ ನಂದನದಂತಿತ್ತು. ಅತಿ ಅಗ್ಗದ ಹೇರಳ ವಿದ್ಯುತ್ತು, ಸ್ವಚ್ಛ ಹವೆ, ಯಥೇಚ್ಛ ಸರಬರಾಜಗುವ ನೀರು ಇತ್ಯಾದಿ ನಗರವಾಗಿತ್ತು. ಎಲ್ಲ ಅನುಕೂಲಗಳಿದ್ದ ಬೆಂಗಳೂರು ಬಿಟ್ಟು ಅದ್ಯಾರು ಕಾಡು-ಕಣಿವೆ-ಪರ್ವತ ಪ್ರದೇಶಕ್ಕೆ ಹೋಗ್ತಾರೆ? ಹೋದರೂ ಆಯಾ ರಾಜ್ಯದ ನಗರ ಅಥವಾ ಮಹಾನಗರದಲ್ಲಿದ್ದು, ವಿಷಯ ಸಂಗ್ರಹಿಸಿ ಪುಸ್ತಕದ ಹಸ್ತಪ್ರತಿ ಕೊಡುತ್ತಾರಷ್ಟೆ. ಎಂದು ಕಾಮತರಿಗೆ ಗುರುಗಳಾಗಿದ್ದ ಕವಿ ಗೋಪಾಲಕೃಷ್ಣ ಅಡಿಗರು, ಕಾಮತರು ಬರದ ಕಾಡಿಗೆ ಹೋಗಿದ್ದ ವಿಚಾರ ತಿಳಿದಾಗ ಉದ್ಧರಿಸಿದ್ದರು. ಹುಚ್ಚು ಅಲೆಮಾರಿಗಳಾಗಿದ್ದ ಕಾಮತರಿಗೆ ಇದೊಂದೂ ಎಗ್ಗಿಲ್ಲದೆ ಅಲೆಯುವ ಸುಸಂಧಿಯಾಯ್ತು ಎರಡು ಜೊತೆ ಬಟ್ಟೆ, ಮಣಭಾರದ ಟ್ರೈಪಾಡ್ ಟೆಲಿಲೆನ್, ಫ್ಲಾಷ್‌ಗನ್, ಕ್ಯಾಮೆರಾಗಳನ್ನು ಹೊತ್ತು ಹೊರಟರು’ ಎಂದು ವಿವರಿಸಲಾಗಿದೆ.
©2024 Book Brahma Private Limited.