‘ಚೌಕಟ್ಟು ಪಾಡು’ ಡಿ.ಜಿ. ಮಲ್ಲಿಕಾರ್ಜುನ್ ಅವರ ಛಾಯಚಿತ್ರ ಕುರಿತ ಲೇಖನಗಳ ಸಂಕಲನವಾಗಿದೆ; ಯಾರಿಗೆ ತಾವಿರುವಲ್ಲಿ ಸಂತೋಷ, ಉತ್ಸಾಹ, ಕುತೂಹಲಗಳು ಇರುವುದಿಲ್ಲವೋ, ಅಂಥವರು ಅವನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋದರೂ ವ್ಯರ್ಥ ಎನ್ನುತ್ತಿದ್ದರು ಪೂರ್ಣಚಂದ್ರ ತೇಜಸ್ವಿ, ಈ ಮಾತು ಛಾಯಾಗ್ರಾಹಕನಿಗೂ ಸೊಗಸಾಗಿ ಅನ್ವಯಿಸುತ್ತದೆ.
ಸುತ್ತಲಿನ ಪರಿಸರದಲ್ಲಿ ವಿಭಿನ್ನ ಚೌಕಟ್ಟುಗಳನ್ನು ಕಾಣಲಾರದ ಕಣ್ಣು, ಒಳ್ಳೆಯ ಫೋಟೋಗಳಿಗಾಗಿ ಪ್ರವಾಸ ಹೊರಟರೆ ಉಪಯೋಗವಿಲ್ಲ. ಆದರೂ ಆಗಾಗ ಕ್ಯಾಮರಾ ಹಿಡಿದು ಊರು ಸುತ್ತದಿದ್ದರೆ ನನಗೆ ಚಡಪಡಿಕೆ ಶುರುವಾಗುತ್ತದೆ. ಈ ಚಡಪಡಿಕೆಯೇ ನನ್ನನ್ನು ಹಲವಾರು ಜಾಗಗಳಿಗೆ ಕರೆದೊಯ್ದಿದೆ. ಹೆಸರಿಲ್ಲದ ಊರುಗಳಿಗೆ ನನ್ನನ್ನು ಎಕ್ಸ್ ಪೋಸ್ ಮಾಡಿದೆ.
ದೇಶದ ಮೂಲೆ ಮೂಲೆಗಳನ್ನು ಸುತ್ತಿ ಅಲ್ಲಿನ ಪ್ರಕೃತಿ, ಸಂಸ್ಕೃತಿ, ಜನಜೀವನ, ಭಾಷೆ, ಆಹಾರ, ಆಚಾರ ಮುಂತಾದವುಗಳನ್ನು ಅನುಭವಿಸುವಂತೆ ಮಾಡಿದೆ. ಹಾಗೆ ತಿರುಗಾಡುವಾಗ ನನ್ನ ಬೊಗಸೆಗೆ ನಿಲುಕಿದ್ದನ್ನು ಚಿತ್ರ-ಬರಹಗಳ ಮೂಲಕ ತೆರೆದಿಡಲು ಯತ್ನಿಸಿದ್ದೇನೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
©2024 Book Brahma Private Limited.