‘ದೃಶ್ಯಕಲಾ’ ಲೇಖಕ ಎನ್. ಮರಿಶಾಮಾಚಾರ್ ಅವರ ಲೇಖನಗಳ ಸಂಕಲನ. ಕಲೆಯ ಕುರಿತಾಗಿ ಆಗಾಗ ಬರೆದ ಲೇಖನಗಳನ್ನು ಈ ಕೃತಿಯಲ್ಲಿ ಒಟ್ಟುಗೂಡಿಸಿದ್ದಾರೆ. ಮೂಲತಃ ಚಿತ್ರಕಲಾವಿದರಾದ ಮರಿಶಾಮಾಚಾರ್, ಕಲೆಯ ಕುರಿತಾಗಿ ಆಳವಾಗಿ ಅಧ್ಯಯನ ನಡೆಸಿದ್ದರು. ಅಲ್ಲದೇ, ವಿವಿಧ ಭಾಷೆಗಳ, ವಿವಿಧ ಗ್ರಂಥಗಳ ಕಲಾ ಇತಿಹಾಸವನ್ನು ಕನ್ನಡದಲ್ಲಿ ದಾಖಲಿಸಿದ್ದಾರೆ. ಈ ಕೃತಿಯಲ್ಲಿ ದೃಶ್ಯಕಲೆಯ ಕುರಿತ ಮಾಹಿತಿ ಇದೆ. ಕಲಾ ಅಧ್ಯಯನಕ್ಕೆ ಈ ಕೃತಿ ಸಹಕಾರಿಯಾಗುತ್ತದೆ.
©2024 Book Brahma Private Limited.