‘ಭಾರತೀಯ ಕಲೆ’ ಲೇಖಕ ಎನ್. ಮರಿಶಾಮಾಚಾರ್ ಅವರ ಕೃತಿ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ್ದು, ಅಂದಿನ ಅಧ್ಯಕ್ಷ ಡಾ. ಸಿದ್ದಲಿಂಗಯ್ಯನವರು ಬೆನ್ನುಡಿ ಬರೆದಿದ್ದಾರೆ. ಕರ್ನಾಟಕದಲ್ಲಿ ಚಿತ್ರ, ಶಿಲ್ಪಕಲಾ ಕ್ಷೇತ್ರದಲ್ಲಿ ಶ್ರೀ ಮರಿಶಾಮಾಚಾರ್ ಬಹುಮಂದಿ ಬಲ್ಲ ಹೆಸರು. ಸ್ವತಃ ಚಿತ್ರ, ಶಿಲ್ಪಕಲಾವಿದರಾದ ಇವರು, ಕನ್ನಡದಲ್ಲಿ ಕಲಾ ಪ್ರಕಾರದಲ್ಲಿ ಬರೆದ ಕೆಲವೇ ಲೇಖಕರಲ್ಲಿ ಒಬ್ಬರು. ಇವರ ಭಾರತೀಯ ಕಲೆ ಕೃತಿಯು ಚಿತ್ರ, ಶಿಲ್ಪಕಲಾಭ್ಯಾಸಿಗಳಿಗೆ ಆಕರ ಗ್ರಂಥದಂತಿದೆ. ಈ ಗ್ರಂಥಕ್ಕೆ ಕಲಾವಿದರು ಮತ್ತು ಆಸಕ್ತರಿಂದ ಬಂದ ಬೇಡಿಕೆ ಕೃತಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಡಾ. ಸಿದ್ಧಲಿಂಗಯ್ಯ.
©2025 Book Brahma Private Limited.