ಚಿತ್ತಾರದ ಗೊಂಬೆ ಚಿತ್ರಕಲೆ

Author : ಟಿ.ಗೋವಿಂದರಾಜು

Pages 51

₹ 40.00




Year of Publication: 2004
Published by: ಕರ್ನಾಟಕ ಲಲಿತಾಕಲಾ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002

Synopsys

ಕರ್ನಾಟಕ ಲಲಿತಾಕಲಾ ಅಕಾಡೆಮಿ ಜನಪ್ರಿಯ ದೇಶಿ ಕಲಾಮಾಲೆಯಲ್ಲಿ ಪ್ರಕಟವಾದ ಕೃತಿ ‘ಚಿತ್ತಾರದ ಗೊಂಬೆ ಚಿತ್ರಕಲೆ’ ಈ ಕೃತಿಯನ್ನು ಜಾನಪದ ಕಲಾವಿದ ಡಾ. ಟಿ.ಗೋವಿಂದರಾಜು ರಚಿಸಿದ್ದಾರೆ. ಲಲಿತಕಲಾ ಅಕಾಡೆಮಿಗಾಗಿ ಅವರು ರಚಿಸಿಕೊಟ್ಟಿರುವ ಈ ಕೃತಿಯು, ಕಲಾ ಪ್ರಕಾರದ ಬಗೆಗಿನ ಒಟ್ಟು ನೋಟವನ್ನು ವಿಭಿನ್ನ ನೆಲೆಯಲ್ಲಿ ನೀಡುವಂತಿರುವುದು ವಿಶೇಷವಾಗಿದೆ. ಗೊಂಬೆಗಳ ಕಲಾತ್ಮಕತೆಗೆ ಸಂಬಂಧಿಸಿ ಬರೆದಿರುವ ವರ್ಣಗಾರಿಕೆ, ಸಂಯೋಜನೆ, ತೆರಪಿನ ಪರಿಕಲ್ಪನೆ, ಆಧುನಿಕ ಸಂದರ್ಭದಲ್ಲಿ ಈ ಕಲೆ ಬಳಕೆಯಾಗುತ್ತಿರುವ ಬಗೆ ಮೊದಲಾದವು ಕುತೂಹಲಕರವಾಗಿವೆ. ಕಲಾವಿದ್ಯಾರ್ಥಿಗಳು ಆಸಕ್ತರು ಅಗತ್ಯವಾಗಿ ಓದಬೇಕಾದ ಅಧ್ಯಯನ ಕೃತಿ ಇದಾಗಿದೆ.

About the Author

ಟಿ.ಗೋವಿಂದರಾಜು

ಡಾ. ಟಿ. ಗೋವಿಂದರಾಜು ಕವಿಯಾಗಿ, ಪ್ರಬಂಧಕಾರರಾಗಿ, ಕತೆಗಾರರಾಗಿ ಪರಿಚಿತರು. ಇವರು ಹುಟ್ಟಿದ್ದು 15.01.1953 ದೊಡ್ಡಬಳ್ಳಾಪುರ ತಾ. ಚನ್ನಾದೇವಿ ಅಗ್ರಹಾರದಲ್ಲಿ. ಇವರ ತಂದೆ  ದೊಡ್ಡೇರಿ ತಿಮ್ಮರಾಯಪ್ಪ, ತಾಯಿ  ಹೊನ್ನಮ್ಮ. ಕೃಷಿಕ ಮನೆತನದವರು. ಹೊನ್ನಮ್ಮ ಅವರು ತಮ್ಮ ಅಪಾರ ದೇಸೀ ಜ್ಞಾನ ವಿಶೇಷದ ಅಭಿವ್ಯಕ್ತಿಗಾಗಿ ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದವರು. ಬೆಂಗಳೂರು ವಿಶ್ವಿ ವಿದ್ಯಾಲಯದಿಂದ  ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಹಾಗೂ ಜಾನಪದ ಅಧ್ಯಯನದಲ್ಲಿ ಪಿಎಚ್.ಡಿ. ಪಡೆದ ಟಿ. ಗೋವಿಂದರಾಜು,  ಪ್ರಾರಂಭಕ್ಕೆ ಸಿನಿಮಾ ಕ್ಷೇತ್ರ, ಎಚ್. ಎಲ್. ನಾಗೇಗೌಡರೊಂದಿಗೆ ಜಾನಪದ ಟ್ರಸ್ಟ್ ಕಾರ್ಯದರ್ಶಿಯಾಗಿ, ಜಾನಪದ ಜಗತ್ತು  ಪತ್ರಿಕಾ ಸಂಪಾದಕನಾಗಿ ದುಡಿದ ಹಿರಿಮೆ ಹೊಂದಿದ್ದಾರೆ. ಸರ್ಕಾರದ ವಿವಿಧ ...

READ MORE

Related Books