ಕಲಾವಿದ ಹೆಬ್ಬಾರರ ರೇಖಾ ಲಾವಣ್ಯ

Author : ವ್ಯಾಸರಾಯ ಬಲ್ಲಾಳ

Pages 96

₹ 81.00




Year of Publication: 2010
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಕೆ.ಕೆ. ಹೆಬ್ಬಾರರು ಈ ದೇಶ ಕಂಡ ಅಪ್ರತಿಮ ಕಲಾವಿದ. ರೇಖೆಗಳ ಮೂಲಕವೇ ಅದ್ಭುತ ಪ್ರಪಂಚ ಸೃಷ್ಟಿಸುವವರು. ರೇಖಾಚಿತ್ರಗಳೆಂದರೆ ಹೆಬ್ಬಾರರು ಎನ್ನುವಷ್ಟು ಮಟ್ಟಿಗೆ ಅವರ ಹೆಸರು ರೇಖೆಗಳೊಂದಿಗೆ ತಳುಕು ಹಾಕಿಕೊಂಡಿದೆ. ರೇಖಾ ಲಾವಣ್ಯವೇ ಅವರ ಜೀವಾಳವಾಗಿತ್ತು. ತಮ್ಮ ಕಲೆಯ ಮೂಲಕ ಕಲಾ ಪ್ರಪಂಚವನ್ನೇ ಬೆಳಗಿದವರು. ಈ ಕಲಾವಿದ ರೇಖಾ ಲಾವಣ್ಯದ ಕುರಿತು ಲೇಕಕ ವ್ಯಾಸರಾಯ ಬಲ್ಲಾಳ ಅವರು ರಚಿಸದ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು ಪ್ರಶಸ್ತಿ’ (1999) ಲಭಿಸಿದೆ.

About the Author

ವ್ಯಾಸರಾಯ ಬಲ್ಲಾಳ
(01 December 1923 - 30 January 2008)

ಆರು ದಶಕಗಳ ಕಾಲ ಸಣ್ಣಕತೆಯ ಪ್ರಕಾರದಲ್ಲಿ ನಿರಂತರವಾಗಿ ತಮ್ಮ ಸೃಜನಶೀಲ ಪ್ರತಿಭೆಯನ್ನು ತೊಡಗಿಸಿಕೊಂಡು ಬಂದಿರುವ ಬಲ್ಲಾಳರು ವಸ್ತುವೈವಿಧ್ಯದಲ್ಲಿ, ಅಭಿವ್ಯಕ್ತ ವಿಧಾನದಲ್ಲಿ ಕನ್ನಡ ಕತಾ ಸಾಹಿತ್ಯಕ್ಕೆ ಸಮೃದ್ಧ ಕೊಡುಗೆ ನೀಡಿದ್ದಾರೆ. ಪ್ರಗತಿಶೀಲ ಚಳುವಳಿಯಿರಬಹುದು, ನವೋದಯ ಸಂಪ್ರದಾಯದ ರೀತಿಯಿರಬಹುದು, ನವ್ಯ ಪ್ರಜ್ಞೆಯ ಪ್ರಭಾವವಿರಬಹುದು- ಈ ಎಲ್ಲವನ್ನೂ ತಮ್ಮ ಸೃಜನಶೀಲ ಪಯಣದಲ್ಲಿ ಬಲ್ಲಾಳರು ಮುಖಾಮುಖಿಯಾಗಿದ್ದಾರೆ. ಆದರೆ ಯಾವ ಪಂಥದ ಜೊತೆಗೂ ತಮ್ಮನ್ನು ಅವರು ಸಮೀಕರಿಸಿಕೊಳ್ಳದೆ ಅನನ್ಯವೆಂಬಂತೆ ಬರೆಯುತ್ತಾ ಬಂದಿದ್ದಾರೆ. ಅವರು 1923 ಡಿಸೆಂಬರ್‌ 01ರಂದು ಉಡುಪಿಯಲ್ಲಿ ಜನಿಸಿದರು. ತಂದೆ ರಾಮದಾಸ, ತಾಯಿ ಕಲ್ಯಾಣಿ. ಮುಂಬಯಿ ಮಹಾನಗರದಲ್ಲಿ ಉದ್ಯೋಗವನ್ನರಿಸದ ಅವರು ವಿದೇಶಿ ತೈಲ ಕಂಪನಿ ಒಂದರಲ್ಲಿ ಶೀಘ್ರಲಿಪಿಕಾರರಾಗಿ ...

READ MORE

Related Books