ಚಿತ್ರಕಲೆಯನ್ನು ಕುರಿತು ಹೇಳುವ ಪೌರಾಣಿಕ ಕೃತಿಗಳು ಅಪರೂಪವಾದರೂ, ಹದಿನೆಂಟು ಉಪಪುರಾಣಗಳಲ್ಲಿ ಒಂದೆಂದು ಪರಿಗಣಿತವಾಗಿರುವ ವಿಷ್ಣುಧರ್ಮೋತ್ತರ ಪುರಾಣದಲ್ಲಿರುವ ’ಚಿತ್ರಸೂತ್ರ’ ಭಾಗವು ಈ ಹಿನ್ನೆಲೆಯಲ್ಲಿ ಮಹತ್ವ ಪಡೆದಿವೆ. ಚಿತ್ರಸೂತ್ರದ ಕನ್ನಡ ಅನುವಾದವನ್ನು ಆರ್ಯ ಆಚಾರ್ಯರು ಮಾಡಿದ್ದಾರೆ. ಪುರಾಣಗಳ ಪರಂಪರೆಯಂತೆ ಚಿತ್ರಸೂತ್ರವು ಕೂಡ ಸಂಭಾಷಣೆಯ ರೂಪದಲ್ಲಿದೆ. ಚಿತ್ರಸೂತ್ರ, ಚಿತ್ರಕಲೆಯು ಇಂದಿನವರೆಗೆ ತಿಳಿದಿರುವ , ಭಾರತೀಯ ಚಿತ್ರಕಲೆಯ ಎಲ್ಲಾ ಪ್ರಕಾರಗಳು, ಕೃತಿರಚನೆಯ ರೀತಿ, ಶೈಲಿಗಳು, ಆದರ್ಶಗಳನ್ನು ತೋರಿಸುತ್ತದೆ. ಭಾರತೀಯ ಚಿತ್ರಪರಂಪರೆ, ಒಳಹೊರಗುಗಳನ್ನು ಅರಿಯಲು ಒಟ್ಟಾರೆ ಚಿತ್ರಸೂತ್ರ ಗ್ರಂಥ ಉಪಯುಕ್ತವಾಗಿದೆ.
©2024 Book Brahma Private Limited.