ಕನ್ನಡ ನಾಡು -ನುಡಿ ಹಿತ ಚಿಂತಕರಾದ ಎಸ್.ಜಿ. ನರಸಿಂಹಾಚಾರ್ ಹಾಗೂ ಎಂ.ಎ. ರಾಮಾನುಜಯ್ಯಂಗಾರ್ಯ ಅವರು ಸಂಯುಕ್ತವಾಗಿ ಚಿಕ್ಕದೇವೇಂದ್ರ ವಂಶಾವಳಿ ಕೃತಿ ರಚಿಸಿದ್ದು, ಈ ಗ್ರಂಥವು ಚಂದ್ರ ರೂಪದಲ್ಲಿದೆ. ಮೂಲ ಕೃತಿಕಾರನ ಹೆಸರು ತಿಳಿದು ಬಂದಿಲ್ಲ. ಕವಿಯು ಚಿಕ್ಕಮಹಾದೇವನ ಕಾಲದಲ್ಲಿ ಶ್ರೀರಂಗಪಟ್ಟಣದಲ್ಲಿ ಇದ್ದನೆಂದೂ ಹೇಳಲಾಗುತ್ತಿದೆ. ಕೃತಿಯಲ್ಲಿ 137 ಪದ್ಯಗಳಿವೆ. ಮೈಸೂರು ಮಹಾರಾಜರ ವಂಶಾವಳಿಯು ಹಾಗೂ ಚರಿತ್ರೆಯು ಸಂಗ್ರಹಿತವಾಗಿದೆ. ಸಣ್ಣ ಗ್ರಂಥವಾಗಿದ್ದರೂ ವಿಶೇಷ ವರ್ಣನಾ ವೈಖರಿಗಳಿಂದ ಕೂಡಿದೆ.
©2024 Book Brahma Private Limited.