ಕನ್ನಡ ನಾಡು-ನುಡಿ ಚಿಂತಕರಾದ ಎಂ.ಎ. ರಾಮಾನುಜಯ್ಯಂಗಾರ್ಯ ಹಾಗೂ ಎಸ್.ಜಿ. ನರಸಿಂಹಾಚಾರ್ ಅವರು ಸಂಯುಕ್ತವಾಗಿ ಗುಬ್ಬಿ ಮಲ್ಲಣಾರ್ಯ ವಿರಚಿತ ‘ಭಾವ ಚಿಂತಾರತ್ನಂ' ಕೃತಿಯನ್ನು ಸಂಪಾದಿಸಿದ್ದಾರೆ. ಗ್ರಂಥದಲ್ಲಿ 360 ವಾರ್ಧಕ ಷಟ್ಪದಿಗಳಿವೆ. ಕವಿಯು ಪ್ರತಿ ದಿನವೂ ಒಂದೊಂದು ಷಟ್ಪದಿ ರಚಿಸಿ, ಶಿವನಿಗೆ ಅರ್ಪಿಸಿರುವುದರಿಂದ ಒಂದು ವರ್ಷದಲ್ಲಿ ಈ ಗ್ರಂಥ ರಚನೆಗೊಂಡಿದ್ದು, ಈ ಕಾರಣಕ್ಕಾಗಿಯೇ ಗ್ರಂಥದಲ್ಲಿ 360 ಷಟ್ಪದಿಗಳಿವೆ ಎಂದು ಹೇಳಲಾಗುತ್ತದೆ. ಕವಿ ಷಡಕ್ಷರಿ ದೇವನು ತನ್ನ ರಾಜಶೇಖರ ವಿಳಾಸದಲ್ಲಿ ಕವಿ ಗುಬ್ಬಿ ಮಲ್ಲಣಾರ್ಯರನ್ನು ಸ್ಮರಿಸಿದ್ದು, ಈತನು ಷಡಕ್ಷರಿ ದೇವನಿಗಿಂತಲೂ ಪೂರ್ವದವನೆಂಬುದು ಸಂಶಯಾತೀತ.
©2024 Book Brahma Private Limited.