‘ಬೆಳಕು’ ಎ.ಸರಸಮ್ಮನವರ ಚುಟುಕು ಸಂಕಲನವಾಗಿದೆ. ಕೃತಿಯ ಕುರಿತು ಬರೆದಿರುವ ಪ್ರಕಾಶಕರು 'ನಮ್ಮ ಜೀವನ ಸುಖಮಯವಾಗಿ ಸಾಗಲು ಸಂಬಂಧಗಳ ಮೌಲ್ಯ ಅರಿತು ಬಾಳಲು ವ್ಯಕ್ತಿತ್ವ ವಿಕಸನ ಹೊಂದಿ ಬದುಕಿನ ಅರ್ಥವನ್ನು ತಿಳಿದು ಆತ್ಮಸ್ಥೆರ್ಯ ಹೊಂದಿ ವಿವೇಚನೆಯಿಂದ ಹೆಜ್ಜೆ ಇಟ್ಟಾಗ ಜೀವನದ ಅನುಭವಗಳಿಂದ ಹೊಸ ಪಾಠವನ್ನು ಕಲಿಯುತ್ತೇವೆ ಎಂಬ ಎಚ್ಚರಿಕೆಯನ್ನು ನೀಡುವಂತ ಹಲವು ವಿಷಯಗಳನ್ನು ಆಧರಿಸಿದ ಲೇಖನಗಳನ್ನು ರಚಿಸಿ ನೀತಿ ಮಾರ್ಗದಲ್ಲಿ ಸಾಗಲು ಭಗವಂತನ ಅನುಗ್ರಹವು ಇರಬೇಕೆಂದು ಭಕ್ತಿ ಸಿಂಚನ ಸೂಸುತ್ತ ದೇಶ, ಭಾಷೆ, ಗುರುವಿನ ಮಹತ್ವ, ಸಮಾನತೆ, ಇನ್ನೂ ಹಲವಾರು ವಿಷಯಗಳನ್ನಾಧರಿಸಿದ "ಕಿರಣ ಕಾಂತಿ” ಎಂಬ ಲೇಖನ ಮಾಲೆ ರಚಿಸಿರುವ ಕಾದಂಬರಿಗಾರ್ತಿಯಾದ ಶ್ರೀಮತಿ ಎ. ಸರಸಮ್ಮ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕಿಯಾಗಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿಯನ್ನು ಹೊಂದಿರುತ್ತಾರೆ. ಇವರು ಸುಮಾರು ಮೂವತ್ತು ವರ್ಷಗಳಿಂದ ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕವನ ಸಂಕಲನ, ಕಥಾ ಸಂಕಲನ, ಚುಟುಕು ಸಂಕಲನ, ಸಾಮಾಜಿಕ ಕಾದಂಬರಿ, ಪತ್ತೇದಾರಿ ಕಾದಂಬರಿ, ಭಕ್ತಿ ಗೀತೆ, ಭಾವಗೀತೆ, ಹನಿಗವನ, ಶುಭನುಡಿ (ಸುಭಾಷಿತ), ನಾಟಕ ಹೀಗೆ ಹಲವು ಪ್ರಕಾರಗಳಲ್ಲಿ ವೈವಿಧ್ಯಮಯವಾದ ಮುವತ್ನಾಲಕ್ಕು ಕೃತಿಗಳನ್ನು ರಚಿಸಿ ಸಾಮಾಜಿಕವಾಗಿ ಅನನ್ಯ ಸೇವೆ ಸಲ್ಲಿಸುತ್ತ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ ಎಂಬುವುದನ್ನು ಪ್ರಕಾಶಕರು ತಿಳಿಸಿದ್ದಾರೆ.
©2024 Book Brahma Private Limited.