ಸೌಮ್ಯಾ ಅವರ ಅಭಿವ್ಯಕ್ತಿಯಲ್ಲಿ ಬದುಕಿನ ಕಂಡುಂಡ ಅನುಭವಗಳು ಈ ಸಂಕಲನದಲ್ಲಿ ಮಡುಗಟ್ಟಿವೆ. ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗುತ್ತಿರುವ ಈ ಕವಯತ್ರಿಯು ಎರಡನೆಯ ಸಂಕಲನ ಇದು. ಇವರ ಮೊದಲ ಸಂಕಲನ 'ಬೆಂಕಿಯಲ್ಲೂ ಬಾಡದ ಹೂವು' ಕನ್ನಡ ಪುಸ್ತಕ ಪ್ರಾಧಿಕಾರದ ಮೆಚ್ಚುಗೆಗೆ ಪಾತ್ರವಾಗಿತ್ತು. ಎರಡನೆ ಕವನ ಸಂಕಲನ 'ಬಯಲಿಗೂ ಗೋಡೆಗಳು'ದಲ್ಲಿ ಒಟ್ಟು 50 ಕವಿತೆಗಳಿವೆ.
ಹಿರಿಯ ಲೇಖಕಿ ಕೆ. ಷರೀಫಾ ಅವರು ’ಬದುಕು ಬವಣಿಗಳ ಮಧ್ಯೆ ಸುಟ್ಟು ಹೋಗದೆ ಫಿನಿಕ್ಸ್ ಹಕ್ಕಿಯಂತೆ ಕ್ರಿಯಾಶೀಲವಾಗುವುದೇ ಅವರ ವಿಶೇಷತೆ. ಈ ಕವಿತೆಗಳು ವಿಕೃತ ವ್ಯವಸ್ಥೆಯಲ್ಲಿನ ಅಸಮಾನತೆಯ ಗೋಡೆಗಳನ್ನು ಕೆಡವಿ, ಸ್ವಸ್ಥ ಸಮಾಣವನ್ನು ಕಟ್ಟುವ ಕನಸು ಕಾಣುತ್ತಿವೆ’ ಎಂದಿದ್ದಾರೆ.
ಕವಿತೆಯ ಸಾಲೊಂದು ಹೀಗಿದೆ-
ಹಕ್ಕಲು ಇದ್ದ ಹೊಲವು
ಇಷ್ಟವಿರದ ಒಡಲು ಬರಡಲ್ಲದೆ
ಅಲ್ಲಮನ ಬಯಲಾಗಲುಂಟೆ
ಹೇಳಾ
©2024 Book Brahma Private Limited.