ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್ ಅವರ ‘ವ್ಯಂಗ್ಯಚಿತ್ರ’ ಕೃತಿಯು ವ್ಯಂಗ್ಯಚಿತ್ರಕಲಾ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ನಟರಾಜ ಹುಳಿಯಾರ್ ಅವರು, `ವ್ಯಂಗ್ಯಚಿತ್ರಕಾರರು ಬಂಡಾಯ ನೆಲೆಯ ಚಿಂತನೆಯನ್ನು ಹೊಂದಿದ್ದು, ಕಲೆಯನ್ನು ಪ್ರತಿಭಟನೆಯ ಅಸ್ತ್ರವಾಗಿ ಸಮರ್ಥವಾಗಿ ಪ್ರಯೋಗಿಸಿದ ಪರಂಪರೆಯನ್ನು ಉಳ್ಳವರು. ಒಂದು ರೀತಿಯಲ್ಲಿ ವ್ಯಂಗ್ಯ ಚಿತ್ರಕಾರರು ನಿಜವಾದ ಜವಾಬ್ದಾರಿಯುತ ಜನವಾದಿ ಕಲಾವಿದರು’ ಎಂದು ಇತ್ತೀಚೆಗೆ ಹೇಳಿದ ಪಿ. ಮಹಮ್ಮದ್, ಕರ್ನಾಟಕದಲ್ಲಿ ಇಂತಹ ವಿಶಿಷ್ಟ ಪಾತ್ರವನ್ನುವಹಿಸಿರುವವರಲ್ಲಿ ಅಗ್ರಗಣ್ಯರೆಂದರೆ ತಪ್ಪಾಗದು. ಅವರು ಹೇಳಿದ ಮಾತುಗಳು ‘ಕಾರ್ಟೂನಿಸ್ಟ್’ ಎನಿಸಿಕೊಳ್ಳುವ ಎಲ್ಲರಿಗೂ ಅನ್ವಯವಾಗಲಿಕ್ಕಿಲ್ಲ. ಆದರೆ ಅವರಿಗೆ ಮಾತ್ರ ಪೂರ್ಣವಾಗಿ ಅನ್ವಯವಾಗುತ್ತದೆ. ಸಾಕಷ್ಟು ವ್ಯಂಗ್ಯಚಿತ್ರಗಳಲ್ಲಿ ಹಾಸ್ಯದ ಹೆಸರಿನಲ್ಲಿ ಇರುವುದು ಅಪಹಾಸ್ಯ; ನಿಜವಾದ ರಾಜಕೀಯ ವ್ಯಂಗ್ಯಚಿತ್ರಗಳಂತೂ ಕಡಿಮೆ, ಅದರಲ್ಲೂ ನಿರ್ದಿಷ್ಟವಾದ, ಜನಪರವಾದ, ಪ್ರಜಾಸತ್ತಾತ್ಮಕ ನಿಲುವು ಅಪರೂಪವೇ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.