ವಡ್ಡರಾಧನೆ ಒಂದು ಮರುಚಿಂತನೆ

Author : ಶೋಭಾ ನಾಯಕ

Pages 88

₹ 75.00




Year of Publication: 2012
Published by: ಬೆಳದಿಂಗಳು ಪ್ರಕಾಶನ
Address: ‘ಸಂಗಮ್ ನಿವಾಸ’ 13/A, ಬಸವ ಕಾಲೋನಿ ಬೆಳಗಾವಿ - 590010

Synopsys

ಲೇಖಕಿ ಶೋಭಾ ನಾಯಕ ಅವರ ಕೃತಿ ‘ವಡ್ಡರಾಧನೆ ಒಂದು ಮರುಚಿಂತನೆ’. ಕನ್ನಡ ಸಾಹಿತ್ಯದ ಮೊಟ್ಟಮೊದಲ ಗದ್ಯಕೃತಿ ಏಮದೇ ಖ್ಯಾತಿಯ ವಡ್ಡಾರಾಧನೆಯು ಈವರೆಗೆ ಚರ್ಚೆಗೆ ಒಳಗಾಗುತ್ತಲೇ ಬಂದಿದೆ. ಪ್ರಾಚೀನ ಸಾಹಿತ್ಯದ ನಿರಂತರ ಅನುಸಂಧಾನದ ಹಿನ್ನೆಲೆಯಲ್ಲಿ ವಡ್ಡಾರಾಧನೆ ಕೃತಿಯನ್ನು ಮರು ಚಿಂತಿಸಲಾಗಿದೆ. ಅಂತಹ ಒಂದು ಪ್ರಯತ್ನವನ್ನು ಲೇಖಕಿ ಶೋಭಾ ನಾಯಕರು ಅವರು ಮಾಡಿದ್ದು, ವಿಶಿಷ್ಟ ಒಳನೋಟಗಳನ್ನು ಇಲ್ಲಿ ಕಾಣಬಹುದು.

About the Author

ಶೋಭಾ ನಾಯಕ
(16 June 1979)

ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿದರು. ಕಂಪ್ಯೂಟರ್ ಸಾಯನ್ಸ್ ಡಿಪ್ಲೊಮಾ ಆಂಡ್ ಇಂಜನಿಯರಿಂಗ್, ಪಿ.ಜಿ.ಡಿಪ್ಲೊಮಾ ಇನ್ ಜೈನಾಲಾಜಿ ಹಾಗೂ ಆರು ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಎಂ.ಫಿಲ್ ಹಾಗೂ ಪಿಹೆಚ್. ಡಿ. ಪದವಿಗಳನ್ನು ಪೂರೈಸಿದ ಇವರು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕಲೆ ಹಾಗೂ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ...

READ MORE

Related Books