ಪಿಎಚ್.ಡಿ. ಪದವಿಗಾಗಿ ಮಲ್ಲಿಕಾರ್ಜುನ ಬಾಗೋಡಿ ಅವರು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ’ಸುರಪುರ ಶೈಲಿಯ ಚಿತ್ರಕಲೆ’ ಪ್ರಬಂಧ. ಸುರಪುರ ಸಂಸ್ಥಾನ ಇತಿಹಾಸ, ಸಾಹಿತ್ಯ, ಕಲೆ, ವಾಸ್ತುಶಿಲ್ಪ ಕುರಿತು ಈಗಾಗಲೇ ಅಧ್ಯಯನಗಳು ಆಗಿವೆ. ಆದರೆ, ಸುರಪುರ ಸಂಸ್ಥಾನದಲ್ಲಿ ಅರಳಿದ ಚಿತ್ರಕಲೆಯ ಕುರಿತು ಸಾಂದರ್ಭಿಕ ಬರೆಹಗಳು ಬಂದಿರುವುದನ್ನು ಬಿಟ್ಟರೆ, ಸಮಗ್ರವಾದ ಅಧ್ಯಯನ ನಡೆದಿರಲಿಲ್ಲ. ಆ ಕೊರತೆಯನ್ನು ಈ ಪುಸ್ತಕ ತುಂಬಿದೆ.
ಬಾಗೋಡಿಯವರೇ ಹೇಳುವಂತೆ ’ಸುರಪುರ ಚಿತ್ರಕಲೆ’ ಭಾರತೀಯ ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ತನ್ನ ವಿಶಿಷ್ಟ ರಚನೆ ಹಾಗೂ ತಂತ್ರಗಳಿಂದ ಸ್ವತಂತ್ರ ಶೈಲಿಯನ್ನು ಕಂಡುಕೊಂಡಿದೆ’. ಇಂಥ ಒಂದು ವಿಶಿಷ್ಟ ಕಲೆಯನ್ನು ಪುಸ್ತಕದ ರೂಪದಲ್ಲಿ ತರುವುದರ ಮೂಲಕ ಕಲಾಸಕ್ತರಿಗೆ ಹತ್ತಿರವಾಗಿದ್ದಾರೆ. ಕ್ಷೇತ್ರಕಾರ್ಯ ಅವಲಂಬಿಸಿ ರೂಪುಗೊಂಡಿದೆ.. ನಾಡಿನ ಅನೇಕ ಕಡೆಗಳಲ್ಲಿ ಸಂಚರಿಸಿ, ವ್ಯವಸ್ಥಿತವಾಗಿ ಪ್ರಬಂಧವನ್ನು ಸಿದ್ಧಪಡಿಸಿದ್ದಾರೆ.
ಒಟ್ಟು ಒಂಭತ್ತು ಅಧ್ಯಾಯಗಳಲ್ಲಿ ಸುರಪುರ ಚಿತ್ರಕಲೆಯ ವಿಷಯಗಳು ಹರಡಿವೆ. ಸಮಾರೋಪದಲ್ಲಿ ಪ್ರತಿಯೊಂದು ಅಧ್ಯಾಯದಲ್ಲಿ ಚರ್ಚಿಸಿದ ವಿಷಯಗಳ ಪಟ್ಟಿಯೊಂದಿಗೆ ಕೆಲವು ಫಲಿತಗಳನ್ನು ನೀಡಲಾಗಿದೆ.
©2024 Book Brahma Private Limited.