ಪ್ರಭುಲಿಂಗ ಲೀಲೆಯ ಸಂಗ್ರಹ

Author : ಎಂ.ಆರ್. ಶ್ರೀನಿವಾಸಮೂರ್ತಿ

Pages 271




Year of Publication: 1934
Published by: ಓ.ಎನ್. ಎಸ್. ಬಸವಲಿಂಗಯ್ಯ
Address: ಕನ್ನಡ ಪ್ರಕಟಣಾ ಸಮಿತಿ, ಮೈಸೂರು ವಿಶ್ವವಿದ್ಯಾಲಯ, ಮೈಸೂರು

Synopsys

ಮೈಸೂರು ವಿಶ್ವವಿದ್ಯಾಲಯದ ಕನ್ನಡ ಗ್ರಂಥ ಮಾಲೆಯಡಿ ಪ್ರಕಟಿತ ಕೃತಿ-ಪ್ರಭುಲಿಂಗ ಲೀಲೆಯ ಸಂಗ್ರಹ. ಎಂ.ಎಸ್. ಬಸವಲಿಂಗಯ್ಯ ಹಾಗೂ ಎಂ.ಆರ್. ಶ್ರೀನಿವಾಸ ಮೂರ್ತಿ ಈ ಕೃತಿಯ ಸಂಪಾದಕರು. ಬಿ.ಎಂ.ಶ್ರೀಕಂಠಯ್ಯ ಪ್ರಧಾನ ಸಂಪಾದಕರು. ವಿಷಯ ಸಂಯೋಜನೆ, ಕಥಾ ರಚನೆಯ ಕೌಶಲ್ಯ, ಉತ್ತಮ ಶ್ರೇಣಿಯ ಪಾತ್ರ ನಿರೂಪಣೆ, ಸಹಜ ಸರಳ ರೀತಿಯ ಬರೆಹ ಶೈಲಿ, ಉತ್ಕೃಷ್ಟವಾದ ಕವಿತಾ ಮಾರ್ಗ-ಇವು ಚಾಮರಸ ಕವಿಯ ಪ್ರಭುಲಿಂಗ ಲೇಲಿಯಲ್ಲಿ ಕಾಣ ಬರುವ ಅಂಶಗಳು.

ಈ ಕಾವ್ಯದಲ್ಲಿ ಸಿದ್ಧಾಂತ ಬೋಧೆ ಇದೆ. ಧರ್ಮೋಪದೇಶವೂ ಇದೆ. ಕಾವ್ಯ ಸೌಂದರ್ಯವೂ ಇದೆ. ಪಾರ್ವತಿಯ ಪ್ರಜ್ಞೆ, ಮಹಾದೇವಿಯ ಬಾಲ್ಯ, ಅಲ್ಲಮನ ವೃತ್ತಾಂತ, ಮಾಯೆಯ ತಿರಸ್ಕಾರ, ಮಹಾದೇವಿಯಕ್ಕಳ ವಿರಕ್ತಿ, ಮುಕ್ತಾಯಕ್ಕನಿಗೆ ಉಪದೇಶ, ಶೂನ್ಯ ಸಿಂಹಾರೋಹಣ, ಪಾರ್ವತಿಯ ಪ್ರಸನ್ನತೆ ಹೀಗೆ ವಿದ್ವತ್ ಪೂರ್ಣವಾದ ಒಟ್ಟು 15 ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.

About the Author

ಎಂ.ಆರ್. ಶ್ರೀನಿವಾಸಮೂರ್ತಿ
(28 August 1892 - 05 September 1953)

ವಿದ್ವಾಂಸರು, ಸಾಹಿತಿಗಳು, ಆಧುನಿಕ ಕನ್ನಡದ ನಿರ್ಮಾತೃಗಳಲ್ಲಿ ಒಬ್ಬರಾದ ಎಂ. ಆರ್. ಶ್ರೀನಿವಾಸಮೂರ್ತಿ ಅವರು ಹುಟ್ಟಿದ್ದು ಮೈಸೂರಿನಲ್ಲಿ. ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ, ರೇಂಜ್ ಇನ್‌ಸ್ಪೆಕ್ಟರ್ ರಾಗಿ ಜಿಲ್ಲಾ ವಿದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ 1947ರಲ್ಲಿ ನಿವೃತ್ತಿ ಪಡೆಯುತ್ತಾರೆ. ಪ್ರಚಂಡ ವಾಗ್ಮಿ, ಉತ್ತಮ ಶಿಕ್ಷಕರು, ಸಮರ್ಥ ಅಧಿಕಾರಿಯಾದ ಅವರು ಸಂಸ್ಕೃತ, ಹಳಗನ್ನಡಗಳ ಅಭ್ಯಾಸದ ಅನುಭವದಿಂದ ರಚಿಸಿದ ಕೃತಿಗಳು.. ವಿದ್ಯಾರ್ಥಿ ದೆಸೆಯಲ್ಲಿಯೇ ರಚಿಸಿದ ಕಾದಂಬರಿ ‘ಸಾವಿತ್ರಿ.’ ಸ್ಕೌಟ್ ಬಾಲಕರ ಅಭಿನಯಕ್ಕೆಂದು ರಚಿಸಿದ ನಾಟಕ ‘ಕಂಠೀರವ ವಿಜಯ.’  ’ಧರ್ಮದುರಂತ, ನಾಗರಿಕ’ ಎಂಬ ನಾಟಕಗಳನ್ನು ರಚಿಸಿದ್ದಾರೆ. ಮಹಾತ್ಯಾಗ ಮತ್ತೊಂದು ಕಾದಂಬರಿ. ’ರಂಗಣ್ಣನ ಕನಸಿನ ದಿನಗಳು’ ಮತ್ತೊಂದು ಕೃತಿ. ಕನ್ನಡ ...

READ MORE

Related Books