ಮುತ್ತು ಮಲ್ಲಿಗೆ

Author : ಸದಾನಂದ ನಾರಾವಿ

Pages 32

₹ 65.00




Year of Publication: 2015
Published by: ಅರೆಹೊಳೆ ಪ್ರತಿಷ್ಠಾನ
Address: ಬಿಜೈ, ಮಂಗಳೂರು - 575004
Phone: 988035917

Synopsys

‘ಮುತ್ತು ಮಲ್ಲಿಗೆ’ ಸದಾನಂದ ನಾರಾವಿ ಅವರ ಚುಟುಕುಗಳ ಸಂಕಲನ. ಚುಟುಕುಗಳೆಂದರೆ ಒಂದಷ್ಟು ತಮಾಷೆ, ಇನ್ನಷ್ಟು ಪೋಲಿಭಾಷೆ. ಮತ್ತೆ, ನಾಲ್ಕು ಸಾಲುಗಳು ಅವಶ್ಯ. ಅಂತ್ಯ ಪ್ರಾಸವಂತೂ ಅಗತ್ಯ ಹೀಗೆಂದು ಕೆಲವರು ಅಭಿಪ್ರಾಯಪಡುತ್ತಾರೆ.  ಅದಲ್ಲ, ಅದಲ್ಲ, ಉಪದೇಶವೇ ಚುಟುಕಿನ ನಿಯತ್ತು ಎಂದು ವಾದಿಸುವವರೂ ಇನ್ನೊಂದೆಡೆ. ಹಾಗಲ್ಲ, ಟೀಕಿಸುವುದು ಬಿಟ್ಟು ಚುಟುಕಿಲ್ಲ, ಅದಿರದಿದ್ದರೆ ಚುಟುಕು ಅಲ್ಲ ಅಂತ ಪ್ರತಿಪಾದಿಸುವವರೂ ಒಂದು ಬದಿಯಲ್ಲಿ. ಇವರ ಮಧ್ಯೆ, ಚುಟುಕು ಅಂದರೆ ಕಾವ್ಯವೇ? ಕಾವ್ಯ ಆಗದ್ದು ಚುಟುಕು ಅಲ್ಲ ಎಂದು ನಿರ್ಧರಿಸುವವರೂ ಇದ್ದಾರೆ. ಆದರೆ ಇಂಥವರ ಸಂಖ್ಯೆ ಕಡಿಮೆ ಇದೆ. ವಾಸ್ತವದಲ್ಲಿ ಚುಟುಕು ಕಾವ್ಯವೇ ಆಗಿದೆ. ಕಾವ್ಯವೂ ಆಗಿರುವಂತೆ  ಚುಟುಕು ಸಹ ಗಂಭೀರವಾಗಿರಬಲ್ಲುದು. ಪ್ರತಿಭೆಯ ಸಾವಿರದ ಅವತಾರಗಳಲ್ಲಿ ಒಂದಾದ ಚುಟುಕು-ಖಂಡಿತವಾಗಿ ನೆಗೆದು ಕಾಣಿಸಿಕೊಳ್ಳುವಂಥದ್ದು, ಗಾಢವಾಗಿ ಆವರಿಸಿಕೊಳ್ಳು ವಂಥದ್ದು, ಒಳಗೊಳಗೆ ಇಳಿದು ಕಾಡತೊಡಗುವಂಥದ್ದು. ಅಂಥಹ ಹಲವಾರು ಕಾಡುವ ಚುಟುಕುಗಳು ಈ ಸಂಕಲನದಲ್ಲಿವೆ. ತಮ್ಮ ಅನುಭವದಲ್ಲಿ ಕಂಡುಂಡ ಸತ್ಯಗಳನ್ನು ಅತ್ಯಂತ ತೀಕ್ಷ್ಣವಾಗಿ ಸದಾನಂದ ನಾರಾವಿ ಅವರು ಚುಟುಕುಗಳ ಮೂಲಕ ವ್ಯಕ್ತಪಡಿಸಿದ್ದಾರೆ.

About the Author

ಸದಾನಂದ ನಾರಾವಿ

ಸದಾನಂದ ನಾರಾವಿಯವರು ಅಂಚೆ ಇಲಾಖೆಯಲ್ಲಿ 29 ವರ್ಷ ಸೇವೆಸಲ್ಲಿಸಿ ನಿವೃತ್ತರಾಗಿ ಪ್ರಸ್ತುತ ಕಾಂತಾವರ ಕನ್ನಡ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕತೆ, ಕವನ, ಲೇಖನಗಳನ್ನು ಬರೆಯುವ ಸದಾನಂದ ನಾರಾವಿಯವರು 'ಮುತ್ತುಮಲ್ಲಿಗೆ', 'ಸಂರಚನೆಯ ಸುತ್ತಮುತ್ತ' (ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ ವಿಜೇತ ಕೃತಿ), 'ಉಜ್ರೆ ಈಶ್ವರ ಭಟ್', 'ಡಾ.ಕೆ, ಪ್ರಭಾಕರ ಆಚಾರ್' ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ಪ್ರಶಸ್ತಿ, ತುಳು ಕತೆಯೊಂದಕ್ಕೆ ತುಳು ಒಕ್ಕೂಟದ ಪ್ರಥಮ ಬಹುಮಾನ ಇತ್ಯಾದಿ ಗೌರವಗಳಿಗೆ ಪಾತ್ರರಾಗಿದ್ದಾರೆ. ತುಳು ಭಾಷೆ ಹಾಗೂ ಸಂಸ್ಕೃತಿಗೆ ಸದಾನಂದ ನಾರಾವಿಯವರ ...

READ MORE

Related Books