ಲೇಖಕ ಎಸ್.ಸಿ. ಪಾಟೀಲ ಅವರ ಕೃತಿ ʻಕರ್ನಾಟಕದ ಭಿತ್ತಿಚಿತ್ರಕಲೆ: ಹಲವು ಹೊಸ ಶೋಧಗಳುʼ. ಕರ್ನಾಟಕದ ಭಿತ್ತಿಚಿತ್ರಗಳ ಕುರಿತು ಬಂದಿರುವ ಕೃತಿಗಳನ್ನು ಅನುಸರಿಸಿ ಅಂತಹ ಸ್ಥಳಗಳಿಗೆ ಭೇಟಿ ನೀಡಿ ಅಭ್ಯಾಸ ಮಾಡಿ, ಛಾಯಾಚಿತ್ರಗಳನ್ನು ತೆಗೆದುಕೊಂಡು ಅವುಗಳನ್ನು ವಿಂಗಡಿಸಿ ಪ್ರಸ್ತುತ ಕೃತಿಯನ್ನು ತಂದಿದ್ದಾರೆ. ಗುಹೆ, ಮಠ, ವಾಡೆ, ಖಾಸಗಿ ಮನೆತನಗಳಲ್ಲಿ ಕಾಣಸಿಗುವ, ಕಾಲಾನುಕ್ರಮದಲ್ಲಿ ಮಾಸಿಹೋಗುವ ಚಿತ್ರಗಳನ್ನು ಓದುಗರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಇತಿಹಾಸ, ಸಂಸ್ಕೃತಿ, ಜಾನಪದ, ಚಿತ್ರಕಲೆಗಳಲ್ಲಿ ಆಸಕ್ತರಾಗಿರುವ ಪಾಟೀಲ ಅವರು ಕರ್ನಾಟಕ ದೃಶ್ಯ ಕಲಾಕ್ಷೇತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಈ ಕೃತಿಯೂ ಒಂದು.
©2024 Book Brahma Private Limited.