ಕರ್ನಾಟಕದ ಐತಿಹಾಸಿಕ ಚಿತ್ರಕಲೆ (ಇತಿಹಾಸವನ್ನು ಸಾರುವ ಚಿತ್ರಗಳು) ಕುರಿತು ಈವರೆಗೂ ಬಂದಿರುವ ಕೃತಿಗಳು ಬೆರಳೆಣಿಕೆಯಷ್ಟು ಮಾತ್ರ. ಅವುಗಳ ಕೊರತೆಯನ್ನು 'ಕರ್ನಾಟಕದ ಆದಿಮ ಚಿತ್ರಕಲೆ' ಸಮರ್ಥವಾಗಿ ತುಂಬಬಲ್ಲದು. ಈ ಕೃತಿಯು ಕರ್ನಾಟಕದಲ್ಲಿ ಈವರೆಗೂ ದಾಖಲಾಗಿರುವ ಬಂಡೆಚಿತ್ರ ನೆಲೆಗಳನ್ನು ಸಮಗ್ರವಾಗಿ ಒಂದೆಡೆ ಕಟ್ಟಿಕೊಟ್ಟಿದೆ. ಬಂಡೆಚಿತ್ರಗಳ ಕ್ಷೇತ್ರಕಾರ್ಯ ಮಾಡುವ ಮತ್ತು ಕ್ಷೇತ್ರಕಾರ್ಯ ಸಂದರ್ಭದಲ್ಲಿ ವಿವಿಧ ಉಪಕರಣಗಳನ್ನು ಬಳಸುವ ವಿಧಾನ ಹಾಗೂ ಕಾಲನಿರ್ಣಯ ಮಾಡುವ ವಿಧಾನಗಳನ್ನು ತಿಳಿಸಿ ಕೊಡುತ್ತದೆ. ಅಲ್ಲದೆ ಕರ್ನಾಟಕದ ಪ್ರತಿಯೊಂದು ನೆಲೆಯ ಬಗೆಗೆ ಸಂಕ್ಷಿಪ್ತ ವಿವರಗಳನ್ನು ಆಕರ ಸಹಿತ ನೀಡುತ್ತದೆ. ಒಟ್ಟಾರೆ, ಇತಿಹಾಸ, ಪುರಾತತ್ವಶಾಸ್ತ್ರ, ಚಿತ್ರಕಲೆ, ಮೊದಲಾದ ಶಿಸ್ತುಗಳ ವಿದ್ವಾಂಸರು, ವಿದ್ಯಾರ್ಥಿಗಳು ಮಾತ್ರವಲ್ಲ; ಹವ್ಯಾಸಿ ಕಲಾಸಕ್ತರು, ಜನಸಾಮಾನ್ಯರು ಕೂಡ ಓದಬಹುದಾದ ಕೃತಿಯಾಗಿದೆ. ಕರ್ನಾಟಕದ ಪ್ರಾಗೈತಿಹಾಸಿಕ ಚಿತ್ರಕಲೆಯ ಹೊಸ ಶೋಧನೆ ಹಾಗೂ ಸಮೀಕ್ಷೆಯನ್ನು ಇದು ಒಳಗೊಂಡಿದೆ. ಜೊತೆಗೆ ಇಲ್ಲಿನ 250ಕ್ಕೂ ಹೆಚ್ಚು ಅಪರೂಪದ ವರ್ಣಚಿತ್ರಗಳು ಓದುಗರಿಗೆ ಹೊಸ ಅನುಭವವನ್ನು ಉಂಟುಮಾಡುತ್ತದೆ.
©2024 Book Brahma Private Limited.